ADVERTISEMENT

ಬದುಕು ಕಲಿಸಿದ ಶರಣರು: ಗಿರಿಜಕ್ಕ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 16:16 IST
Last Updated 15 ಅಕ್ಟೋಬರ್ 2019, 16:16 IST
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು   

ಹುಬ್ಬಳ್ಳಿ: ‘ಮನುಷ್ಯ ಸ್ವಾಭಿಮಾನ, ಸ್ವಾವಲಂಬನೆ, ಕಾಯಕ ಹಾಗೂ ದಾಸೋಹವನ್ನು ಮೈಗೂಡಿಸಿಕೊಂಡು ವಿವೇಚನೆಯಿಂದ ಒಂದಾಗಿ ಬದುಕಲು ಕಲಿಸಿದರು’ ಎಂದು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಶಹರ ಘಟಕ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾತೋಶ್ರೀ ಅಂದಾನೆಮ್ಮಾ ಯಕ್ಕುಂಡಿಮಠ, ಆರ್‌.ಎಲ್. ಭಾಗಿ ಹಾಗೂ ಶಿವಲಿಂಗಮ್ಮಾ ಕಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಶರಣರು ತಮ್ಮ ನುಡಿ ಮತ್ತು ನಡೆಯಲ್ಲಿ ಒಂದಾಗಿ ಬದುಕುವ ಮೂಲಕ, ಜೀವನ ಮೌಲ್ಯಗಳಿಗೆ ಶಕ್ತಿ ತುಂಬಿದರು. ಬಸವಣ್ಣ ಸೇರಿದಂತೆ ಹಲವರು ಸತಿ-ಪತಿ ಸಿದ್ಧಾಂತದ ಹಿನ್ನೆಲೆಯಲ್ಲಿ ಧರ್ಮ ಹಾಗೂ ಸಮಾಜವನ್ನು ಪುನರ್ ನಿರ್ಮಾಣ ಮಾಡಲು ಪ್ರಯತ್ನಿಸಿದರು’ ಎಂದರು.

ADVERTISEMENT

‘ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು, ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ ಕೀರ್ತಿ ಅಕ್ಕ ನಾಗಲಾಂಬಿಕೆ ಮತ್ತು ಚನ್ನ ಬಸವಣ್ಣನವರಿಗೆ ಸಲ್ಲುತ್ತದೆ. ಶರಣರು ಮನಮೆಚ್ಚಿ ನಡೆದರೆ ವಿನಾ, ಜನಮೆಚ್ಚಿಸಲಿಕ್ಕೆ ಅಲ್ಲ’ ಎಂದು ಹೇಳಿದರು.

ದತ್ತಿ ದಾನಿ ಶಿವಲಿಂಗಮ್ಮಾ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜೋತಿಲಕ್ಷ್ಮಿ ಡಿ. ಪಿ. ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಪ್ರೊ.ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಮೃತ್ಯುಂಜಯ ಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದಯಚಂದ್ರ ದಿಂಡವಾರ ವಂದಿಸಿದರು. ಅಕ್ಕನ ಬಳಗ ಅಧ್ಯಕ್ಷೆ ಉಮಾ ಪಂಚಾಂಗಮಠ, ಡಾ. ರಮೇಶ ಅಂಗಡಿ, ಆರ್.ಎಂ. ಗೊಗೇರಿ, ಎಸ್.ಐ. ನೇಕಾರ, ಚನ್ನಬಸಪ್ಪ ಧಾರವಾಡಶೆಟ್ಟರ,ಸುರೇಶ ಹೊರಕೇರಿ, ಗಂಗಮ್ಮಾ ವಿಭೂತಿ, ಸುಮಂಗಲಾ ಅಂಗಡಿ, ಸುಶೀಲಾ ಅಂಗಡಿ ಹಾಗೂ ಎಂ.ಪಿ. ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.