ADVERTISEMENT

ಶಿವರಾತ್ರಿ ಉತ್ಸವ; ಸಿದ್ಧಾರೂಢಮಠದಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 16:05 IST
Last Updated 26 ಫೆಬ್ರುವರಿ 2025, 16:05 IST
ಮಹಾಶಿವರಾತ್ರಿ ಪ್ರಯುಕ್ತ ಹುಬ್ಬಳ್ಳಿಯ ಸಿದ್ಧಾರೂಢಮಠದ ಆವರಣದಲ್ಲಿ ಬುಧವಾರ ಸಂಜೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಮಹಾಶಿವರಾತ್ರಿ ಪ್ರಯುಕ್ತ ಹುಬ್ಬಳ್ಳಿಯ ಸಿದ್ಧಾರೂಢಮಠದ ಆವರಣದಲ್ಲಿ ಬುಧವಾರ ಸಂಜೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಲ್ಲಿನ ಸಿದ್ಧಾರೂಢಮಠಕ್ಕೆ ಬುಧವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಭಕ್ತರು ತಂಡೋಪತಂಡವಾಗಿ ಹರಿದು ಬಂದರು. ಸಿದ್ಧಾರೂಢ ಮತ್ತು ಗುರುನಾಥರೂಢರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಶಿವರಾತ್ರಿ ಉತ್ಸವದ ಅಂಗವಾಗಿ ಶ್ರೀಮಠವನ್ನು ಸಂಪೂರ್ಣ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಉಭಯ ಶ್ರೀಗಳ ಗದ್ದುಗೆಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಗುರುವಾರ ನಡೆಯಲಿರುವ ರಥೋತ್ಸವದ ಪೂರ್ವ ಸಿದ್ಧತೆಯಾಗಿ, ರಥಕ್ಕೆ ಕಳಸ ಅಳವಡಿಕೆ ಮಾಡಲಾಯಿತು.

ಶ್ರೀಮಠದಲ್ಲಿ ನಡೆಯಲಿರುವ ದಾಸೋಹದ ಹೊರತಾಗಿ, ವಿವಿಧ ಭಾಗಗಳಿಂದ ಬಂದ ರೈತರು ಹಾಗೂ ಸಂಘಟನೆಗಳು ಭಕ್ತರಿಗೆ ಮಠದ ಆವರಣದಲ್ಲಿ ಪ್ರಸಾದ ವಿತರಣೆ ಮಾಡಿದವು. ಬಿಸಿಲ ಧಗೆಯಿಂದ ಬಳಲಿದ ಭಕ್ತರಿಗೆ ಕುಡಿಯಲು ನೀರಿನ ವ್ಯವಸ್ಥೆ, ಮಜ್ಜಗಿ, ಶರಬತ್ ವಿತರಣೆ, ದ್ರಾಕ್ಷಿ, ಕಲ್ಲಂಗಡಿ, ಬಾಳೆ ಹಣ್ಣು, ಕರ್ಜೂರ ಸೇರಿದಂತೆ ಇನ್ನಿತರ ಹಣ್ಣುಗಳನ್ನು ವಿತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.