
ಹುಬ್ಬಳ್ಳಿ: ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದ 12ನೇ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಐಶ್ವರ್ಯ ಬಾಲೆಹೊಸೂರು ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪಿಸ್ತೂಲ್ ಐಎಸ್‌ಎಸ್‌ಎಫ್‌ನ ಮಹಿಳೆಯರ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಪುರುಷರ ವಿಭಾಗದಲ್ಲಿ (ಪಿಸ್ತೂಲ್) ಸಿದ್ಧಾರ್ಥ ದಿವಟೆ ಬೆಳ್ಳಿ ಪದಕ ಗೆದ್ದರು. ಪಿಸ್ತೂಲ್ ಮಾಸ್ಟರ್ ವಿಭಾಗದಲ್ಲಿ ಜಯಶ್ರೀ ಪಾಟೀಲ ಬೆಳ್ಳಿ, ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಶಾಂತ್ ಪಾವಸ್ಕರ್ ಕಂಚಿನ ಪದಕ ಪಡೆದರು.
ಎನ್.ಆರ್ ಪಿಸ್ತೂಲ್; ಮಹಿಳೆಯರ ತಂಡ ವಿಭಾಗ–ಕಂಚಿನ ಪದಕ; ಮಮತಾ ಗೌಡ, ಗೌರಿ ಕೋಚ್ಲಾಪುರಮಠ, ಸ್ಟೇಫಿ ಲಗಲಿ.
ಎನ್.ಆರ್ ಮಹಿಳೆಯರ ಸಬ್ ಯೂತ್ ತಂಡ ವಿಭಾಗ–ಕಂಚಿನ ಪದಕ: ಗೌರಿ ಕೋಚ್ಲಾಪುರಮಠ, ಸುಮಂಗಲ ಡಂಗನವರ, ವೇದಾವತಿ.
ಜುಲೈ 13ರಿಂದ ಜುಲೈ 23ರವರೆಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ ಶೂಟರ್‌ಗಳು 8 ಚಿನ್ನ 11 ಬೆಳ್ಳಿ, 11 ಕಂಚಿನ ಪದಕಗಳನ್ನು ಪಡೆದರು.
ಶೂಟರ್‌ಗಳು ಅಕಾಡೆಮಿಯ ಕೋಚ್ ರವಿಚಂದ್ರ ಬಾಲೆಹೊಸೂರ್ ಅವರ ಬಳಿ ತರಬೇತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.