ADVERTISEMENT

ಗಾಯಕ ಪಾಡಿಗಾರ ಆರಾಧನೆ ನಾಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:27 IST
Last Updated 27 ಜೂನ್ 2025, 16:27 IST

ಹುಬ್ಬಳ್ಳಿ: ಇಲ್ಲಿನ ಹಳೆಹುಬ್ಬಳ್ಳಿಯ ಪರಂಪರಾ ಸಂಗೀತ ಪ್ರತಿಷ್ಠಾನದ ವತಿಯಿಂದ ಭಾರತರತ್ನ ಭೀಮಸೇನ ಜೋಶಿ ಅವರ ಶಿಷ್ಯ, ಹಿಂದುಸ್ತಾನಿ ಗಾಯಕ ದಿ. ಪಂ. ಶ್ರೀಪತಿ ಪಾಡಿಗಾರ ಅವರ ಆರಾಧನೆ ಅಂಗವಾಗಿ ಜೂನ್‌ 29ರಂದು ಸಂಜೆ 4ಕ್ಕೆ ಹಳೇ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರಸ್ವಾಮಿ ಮಠ ಸಭಾಗ್ರಹದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.

ಆನಂದವನದ ವಿಶ್ವನಾಥ ಚಕ್ರವರ್ತಿ, ಶ್ರೀಮಂತ ನಾಡಿಗೀರ, ಉದಯಕುಮಾರ ದೇಸಾಯಿ, ನಾರಾಯಣ ದೇಸಾಯಿ, ಶ್ರೀಪಾದ ದೇಸಾಯಿ, ಶ್ಯಾಮರಾವ್ ದೇಸಾಯಿ, ಗಾಯಕ ಕೃಷ್ಣೇಂದ್ರ ವಾಡೀಕರ ಪಾಲ್ಗೊಳ್ಳಲಿದ್ದಾರೆ. ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಶಫಿಖಾನ್, ಐಶ್ವರ್ಯ ದೇಸಾಯಿ, ಹರೀಶ ಅರಬಟ್ಟಿ ಹಾಗೂ ಕೃಷ್ಣೇಂದ್ರವಾಡಿಕರ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ವೀಣಾ ಮಠ ವೈಲಿನ್‌ ಹಾಗೂ ಬಾಲ ಪ್ರತಿಭೆ ರೋಹಿತ್ ಪೂಜಾರ ಗಾಯನ, ವೆಂಕಟೇಶ ಜೋಶಿ ಅವರಿಂದ ದಾಸವಾಣಿ ಪ್ರಸ್ತುತಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT