ADVERTISEMENT

ಜಾನುವಾರು ಅಕ್ರಮ ಸಾಗಾಟ: 6 ಜನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:27 IST
Last Updated 20 ಮೇ 2022, 4:27 IST
ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮುಚೆವಾಲೆ ಫಾರ್ಮ್ ಹತ್ತಿರ ಜಾನುವಾರು ಅಕ್ರಮ ಸಾಗಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮುಚೆವಾಲೆ ಫಾರ್ಮ್ ಹತ್ತಿರ ಜಾನುವಾರು ಅಕ್ರಮ ಸಾಗಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ   

ಕಲಘಟಗಿ: ತಾಲ್ಲೂಕಿನ ಚಳಮಟ್ಟಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮುಚೆವಾಲೆ ಫಾರ್ಮ್ ಹತ್ತಿರ ಜಾನುವಾರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಹಾಲಿನ ವಾಹನದಲ್ಲಿ 20 ಎಮ್ಮೆ, 13 ಕೋಣ ಹಾಗೂ 1 ಸಣ್ಣ ಕರು ಸೇರಿ ₹10,58 ಲಕ್ಷ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಬಂದು ಮುಚೆವಾಲೆ ಫಾರ್ಮ ಹೌಸ್‌ನಲ್ಲಿ ಕೂಡಿಟ್ಟು ಮಂಗಳೂರಿಗೆ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕಲಘಟಗಿ ಪಟ್ಟಣದ ನಿವಾಸಿಗಳಾದ ರುಸ್ತುಮಸಾಬ ಬಡಸಾಬ್ ನಾಲಬಂದ, ರಿಯಾಜ್ ಅಬ್ದುಲ್ ಸಾಬ್ ನಾಲಬಂದ, ಆರೀಫ್‌ ಮಕ್ತುಂ ಸಾಬ್ ನಾಲಬಂದ, ಹಳೇಹುಬ್ಬಳ್ಳಿಯ ಖಾಜಾಮೋದ್ದಿನ್‌, ಮಾಬೂಸಾಬ್ ಚಂದಾಪುರ, ಅಂಬಲಪುರ ಕೇರಳ ನಿವಾಸಿ ಸಜೇಶ ಕೇಜಿ, ನಿಕ್ಸಾನ್ ಚಾಕೋ ವರ್ಗಿಸ್ ಅವರನ್ನು ವಾಹನದ ಸಮೇತ ಬಂಧನ ಮಾಡಿದ್ದಾರೆ.

ADVERTISEMENT

ಕಲಘಟಗಿ ಪೊಲೀಸ್ ಠಾಣೆ ಸಿಪಿಐ ಶ್ರೀಶೈಲ ಕೌಜಲಗಿ, ಎಸ್. ಐ ಗರಗ, ನಂದೀಶ ವಡ್ರಾಳೆ, ಶ್ರೀಧರ ಗುಗ್ಗರಿ, ಮೀರಾಸಾಬ ಪಶ್ಚಾಪೂರ, ಉಳವೇಶ ಸಂಪಗಾವಿ, ಗೋಪಾಲ ಪಿರಗಿ, ಅನೀಲ ವಡ್ಡರ, ಶಿವಾನಂದ ಕಾಂಬಳೆ, ಮಲ್ಲಿಕಾರ್ಜುನ, ವಿಠಲ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.