ADVERTISEMENT

ಸ್ಕೇಟಿಂಗ್: ಹುಬ್ಬಳ್ಳಿ ಸ್ಪರ್ಧಿಗಳಿಗೆ 11 ಪದಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 12:58 IST
Last Updated 30 ಸೆಪ್ಟೆಂಬರ್ 2022, 12:58 IST
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ, ನಾಲ್ಕನೇ ಓಪನ್ ಸ್ಟೇಟ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್-2022 ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಆರು ಸ್ಪರ್ಧಿಗಳು 11 ಪದಕಗಳನ್ನು ಗೆದ್ದಿದ್ದಾರೆ. ತರಬೇತುದಾರ ಅಕ್ಷಯ ಸೂರ್ಯವಂಶಿ ಇದ್ದಾರೆ

ಹುಬ್ಬಳ್ಳಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗ ಮಹಾನಗರ ಪಾಲಿಕೆ ಮಕ್ಕಳ ದಸರಾ ಅಂಗವಾಗಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಲ್ಕನೇ ಓಪನ್ ಸ್ಟೇಟ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್-2022 ಪಂದ್ಯಾವಳಿಯಲ್ಲಿ, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಆರು ಸ್ಪರ್ಧಿಗಳು ನಾಲ್ಕು ಚಿನ್ನದ ಪದಕಗಳು ಸೇರಿದಂತೆ 11 ಪದಕಗಳನ್ನು ಗಳಿಸಿದ್ದಾರೆ.

ಸಮರ್ಥ ಆರ್. ಮರಾಠೆ ಮತ್ತು ಸ್ವರ ಎಸ್. ಪಾಟೀಲ್ ತಲಾ 2 ಚಿನ್ನದ ಪದಕ, ಸಾನ್ವಿ ಸಾಂಬ್ರಾಣಿ ಮತ್ತು ಕೃತಾರ್ಥ್ ಐತಾಳ್ ತಲಾ 2 ಬೆಳ್ಳಿ ಪದಕ, ಅನೀಶ್ ಹುಬ್ಬಳ್ಳಿ 2 ಕಂಚಿನ ಪದಕ ಹಾಗೂ ರಾಹಿಲ್ ಹುಲಮನಿ 1 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧಿಗಳಿಗೆ ಅಕ್ಷಯ ಸೂರ್ಯವಂಶಿ ಅವರು ತರಬೇತಿ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT