ADVERTISEMENT

ಸ್ಕೇಟಿಂಗ್: ಹುಬ್ಬಳ್ಳಿ ಅಕಾಡೆಮಿಗೆ 116 ಪದಕ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 4:35 IST
Last Updated 12 ಅಕ್ಟೋಬರ್ 2022, 4:35 IST
ಹುಬ್ಬಳ್ಳಿಯಲ್ಲಿ ಧಾರವಾಡ ರೋಲರ್, ಸ್ಕೇಟಿಂಗ್ ಅಸೋಸಿಯೇಷನ್ ಏರ್ಪಡಿಸಿದ್ದ 8ನೇ ಜಿಲ್ಲಾ ಮಟ್ಟದ ಪಂದ್ಯಾವಳಿ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ 116 ಪದಕಗಳನ್ನು ಗೆದ್ದಿರುವ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್‌ ಆಕಾಡೆಮಿಯ ಮಕ್ಕಳು ವಿಜಯದ ಸಂಕೇತ ಪ್ರದರ್ಶಿಸಿದರು

ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆಯ ಸ್ಕೇಟಿಂಗ್‌ ರಿಂಕ್‌ನಲ್ಲಿ ಧಾರವಾಡ ರೋಲರ್, ಸ್ಕೇಟಿಂಗ್ ಅಸೋಸಿಯೇಷನ್ ಇತ್ತೀಚೆಗೆ ಏರ್ಪಡಿಸಿದ್ದ 8ನೇ ಜಿಲ್ಲಾ ಮಟ್ಟದ ಪಂದ್ಯಾವಳಿ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್‌ ಅಕಾಡೆಮಿಯ 61 ಮಕ್ಕಳು 116 ಪದಕಗಳನ್ನು ಗೆದ್ದಿದ್ದಾರೆ.

ಸ್ಪೀಡ್ ಕಾಡ್ ವಿಭಾಗದಲ್ಲಿ 48, ಸ್ಪೀಡ್ ಇನ್‌ಲೈನ್ ವಿಭಾಗದಲ್ಲಿ 34, ರೋಲರ್ ಹಾಕಿಯಲ್ಲಿ 3 ಹಾಗೂ ಬೇಸಿಕ್ ಇನ್‌ಲೈನ್‌ನಲ್ಲಿ 30 ಪದಕ ಗೆದ್ದಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ 38ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನಶಿಪ್‌ನಲ್ಲಿ ಅಕಾಡೆಮಿಯ 33 ಮಕ್ಕಳು ಆಯ್ಕೆಯಾಗಿದ್ದಾರೆ. ಇವರಿಗೆ ಅಕ್ಷಯ ಸೂರ್ಯವಂಶಿ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT