ADVERTISEMENT

ಕೌಶಲಾಭಿವೃದ್ಧಿ ತರಬೇತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 12:51 IST
Last Updated 24 ಸೆಪ್ಟೆಂಬರ್ 2020, 12:51 IST

ಹುಬ್ಬಳ್ಳಿ: ಇಲ್ಲಿನ ಗಣೇಶಪೇಟೆಯ ಕೊರವಿ ಪ್ಲಾಜಾದಲ್ಲಿ ಶುಕ್ರವಾರ (ಸೆ. 25) ಬೆಳಿಗ್ಗೆ 11 ಗಂಟೆಗೆ ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ಜರುಗಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ದಿವಟೆ ಮಾತನಾಡಿ ‘ನಮ್ಮ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಉದ್ಘಾಟನಾ ಸಮಾರಂಭದಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅರಿಕೇರಿ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಸಾಹಿತಿ ಶಿವಲಿಂಗಮ್ಮ ಕಟ್ಟಿ, ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.

‘ಗ್ರಾಹಕ ಸೇವಾ ಪ್ರತಿನಿಧಿ, ಕೈಗಾರಿಕೆ ಹೊಲಿಗೆ ತರಬೇತಿ ಯಂತ್ರ, ಬ್ಯೂಟಿಷಿಯನ್‌ ಹೀಗೆ ಹಲವಾರು ಕೌಶಲ ಕಲಿಕೆಗೆ ಸೌಲಭ್ಯಗಳಿವೆ. ಈ ಎಲ್ಲ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಸೌಲಭ್ಯ ನೀಡಲಾಗುವುದು. ಎಲ್ಲರಿಗೂ ತರಬೇತಿಗೆ ಬೇಕಾಗುವ ಕಚ್ಚಾ ಸಾಮಗ್ರಿ ಮತ್ತು ಪಠ್ಯಗಳನ್ನು ಉಚಿತವಾಗಿ ಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಕೌಶಲ ತರಬೇತಿಗೆ ಕನಿಷ್ಠ 18 ವರ್ಷಗಳಾಗಿರಬೇಕು, ಸಂಸ್ಥೆಯಿಂದಲೇ ಉಚಿತವಾಗಿ ನೋಂದಣಿ ಮಾಡಲಾಗುವುದು. ಆಸಕ್ತರು 9945861900 ಸಂಪರ್ಕಿಸುವಂತೆ ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.