ಅಮ್ಮಿನಬಾವಿ (ಉಪ್ಪಿನಬೆಟಗೇರಿ): ಭಾರತದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಹೇರಿದ್ದನ್ನು ಖಂಡಿಸಿ ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಧಾರವಾಡ ಗ್ರಾಮೀಣ ಭಾರತೀಯ ಜನತಾ ಪಕ್ಷದ ಮಂಡಲ ವತಿಯಿಂದ ಬುಧವಾರ ಪಂಜಿನ ಮೆರವಣಿಗೆ ನಡೆಯಿತು.
ಅಮ್ಮಿನಬಾವಿಯ ಶ್ರೀ ಶಾಂತೇಶ್ವರ ಮಠದ ಆವರಣದಿಂದ ಆರಂಭವಾದ ಪಂಜಿನ ಮೆರವಣಿಗೆಗೆ ಮಾಜಿ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು. ಹನುಮ ದೇವಸ್ಥಾನ, ಮಾರ್ಕೆಟ್ ರಸ್ತೆ, ನಾಶಿಪುಡಿ ಓಣಿ, ಕುರುಬರ ಓಣಿ, ಗುಡಿ ಓಣಿಯಲ್ಲಿ ಸಂಚರಿಸಿ. ಮರಳಿ ಮಸೂತಿ ಮುಂಭಾಗದ ರಸ್ತೆ ಮೂಲಕ ಸಾಗಿ ಶ್ರೀಮಠಕ್ಕೆ ಬಂದಿತು.
ಅಮೃತ ದೇಸಾಯಿ ಮಾತನಾಡಿ, 1975ರಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ವಿಪಕ್ಷದ ಅನೇಕ ನಾಯಕರನ್ನು ಜೈಲಿಗೆ ಅಟ್ಟಿದ್ದರು. ಭಾರತದ ಸಂವಿಧಾನವನ್ನು ಗಾಳಿಗೆ ತೂರಿ ಸರ್ವಾಧಿಕಾರ ಧೋರಣೆ ತಳೆದು ಜೂನ್ 25ಕ್ಕೆ 50 ವರ್ಷ ಪೂರ್ಣಗೊಂಡಿದೆ. ಆದರೂ ಆ ಕರಾಳ ನೆನಪು ಮಾತ್ರ ಇಂದಿಗೂ ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ ಎಂದರು.
ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ರುದ್ರಪ್ಪ ಅರಿವಾಳದ, ಸುರೇಂದ್ರ ದೇಸಾಯಿ, ಮಹದೇವಪ್ಪ ದಂಡಿನ, ಯಲ್ಲಪ್ಪ ಜಾನುಕೂನವರ, ಈರಯ್ಯ ಚಿಕ್ಕಮಠ, ಶ್ರುತಿ ಬೆಳ್ಳಕ್ಕಿ, ಲಕ್ಷ್ಮಿ ಕಾಶಿಗಾರ, ಕಿರಣ ಜಾಧವ, ಸಿದ್ದಪ್ಪ ತಿದಿ, ಮಹಾಂತೇಶ ಹುಲ್ಲೂರ, ಮೌನೇಶ ಪತ್ತಾರ ಹಾಗೂ ಅನೇಕ ಗ್ರಾಮದ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.