ADVERTISEMENT

ನೇತಾಜಿ ದೂರದೃಷ್ಟಿ ನಾಯಕ: ಡಾ. ವಿಜಯಕುಮಾರ ಬೆಟಗಾರ

ವಿವಿಧೆಡೆ ಸುಭಾಸಚಂದ್ರ ಬೋಸ್‌ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 5:21 IST
Last Updated 25 ಜನವರಿ 2022, 5:21 IST
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ‘ಪರಾಕ್ರಮ ದಿನ’ದ ಕಾರ್ಯಕ್ರಮ ನಡೆಯಿತು
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ‘ಪರಾಕ್ರಮ ದಿನ’ದ ಕಾರ್ಯಕ್ರಮ ನಡೆಯಿತು   

ಹುಬ್ಬಳ್ಳಿ:ನೇತಾಜಿ ಎಂದೇ ಪ್ರಸಿದ್ಧರಾಗಿದ್ದ ಸುಭಾಷಚಂದ್ರ ಬೋಸ್‌ ಅವರುಭಾರತದ ಸ್ವಾತಂತ್ರ ಹೋರಾಟದಲ್ಲಿ ವಿಶಿಷ್ಟ ಪಾತ್ರವಹಿಸಿದ್ದರು. ದೂರದೃಷ್ಟಿಯ ನಾಯಕರಾಗಿದ್ದರು ಎಂದು ಕಲಘಟಗಿಯ ಗುಡ್ ನ್ಯೂಸ್ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ವಿಜಯಕುಮಾರ ಬೆಟಗಾರ ಹೇಳಿದರು.

ನಗರದ ಮೂರುಸಾವಿರಮಠದ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪರಾಕ್ರಮ ದಿವಸದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಇಂದಿನ ವಿದ್ಯಾರ್ಥಿಗಳು ಬೋಸ್ ಅವರನ್ನು ಸರಿಯಾಗಿ ಅಧ್ಯಯನ ಮಾಡಬೇಕಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಅಗಾಧ ಪ್ರಭಾವ ಬೀರಿದ್ದರು ಎಂದರು.

ADVERTISEMENT

ಪ್ರಾಚಾರ್ಯ ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಸಮಾಜದಲ್ಲಿ ಅನ್ಯಾಯವಾಗುವುದನ್ನು ಕಂಡಾಗ ನಾವು ಪ್ರಶ್ನೆ ಮಾಡುವ, ಅದನ್ನು ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ರೂಪಾ ಕಡಗಾವಿ, ಭಾಗ್ಯಶ್ರೀ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹಾದೇವ ಹರಿಜನ, ದೀಪಾ ಚಲವಾದಿ, ಸಂಗೀತಾ ಕಂಪ್ಲಿಕೊಪ್ಪ, ಡಾ. ಸಿಸಿಲಿಯಾ ಡಿಕ್ರೋಜ್‌,ಗ್ರಂಥಪಾಲಕಿಸಹನಾ ಉಪ್ಪಿನ, ಮನೋವಿಜ್ಞಾನ ವಿಭಾಗದ ಸುಷ್ಮಿಮಾ ಕೆ. ಇದ್ದರು.

ತತ್ವಾದರ್ಶ ಪಾಲನೆಗೆ ಸಲಹೆ:ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅವರ ತತ್ವ-ಆದರ್ಶಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಬಸವರಾಜ ಜಿಗಳಿ ಹೇಳಿದರು.

ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ‘ಪರಾಕ್ರಮ ದಿನ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಪಾಟೀಲ,ಪ್ರಾಚಾರ್ಯೆ ಡಾ.ಉಮಾ ವಿ. ನೇರ್ಲೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.