ADVERTISEMENT

ಕರಡಿ ದಾಳಿ: ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 9:24 IST
Last Updated 22 ಸೆಪ್ಟೆಂಬರ್ 2022, 9:24 IST
ಫಕ್ಕೀರಪ್ಪ
ಫಕ್ಕೀರಪ್ಪ    

ಹುಬ್ಬಳ್ಳಿ: ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಮುಂಡಗೋಡ ತಾಲೂಕಿನ ಕಾತೂರಿನ 40 ವರ್ಷದ ಫಕ್ಕೀರಪ್ಪ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಫಕ್ಕೀರಪ್ಪ ಅವರ‌ ಮೇಲೆ ಜುಲೈ 31ರಂದು ಕರಡಿ ದಾಳಿ ಮಾಡಿತ್ತು. ಮುಖ ಮತ್ತು ಕಣ್ಣಿನ ಭಾಗದ ಮೂಳೆಯನ್ನು ಕರಡಿ ಕಿತ್ತುಕೊಂಡು ಹೋಗಿತ್ತು. ಅಲ್ಲದೇ ಕೈಗಳಿಗೆ ಗಾಯವನ್ನು ಮಾಡಿತ್ತು. ಆರಂಭದಲ್ಲಿ ಮುಂಡಗೋಡ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು, ನಂತರ ವೈದ್ಯರು ಕಿಮ್ಸ್ ಗೆ ದಾಖಲಾಗುವಂತೆ ಸೂಚಿಸಿದ್ದರು ಎಂದು‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಾಳಿಯಲ್ಲಿ ಫಕ್ಕೀರಪ್ಪ ಅವರ ಕಣ್ಣಿನ ರೆಟಿನಾ ಭಾಗಕ್ಕೆ ಯಾವುದೇ ಹಾನಿಯಾಗಿಲ್ಲದಿರುವುದು‌ ಗೊತ್ತಾಯಿತು. ನಂತರ ಡಾ. ಮಂಜುನಾಥ ವಿಜಾಪುರ, ಡಾ. ವಸಂತ ಕಟ್ಟೀಮನಿ, ಡಾ. ವಿವೇಕಾನಂದ ಜೀವಣಗಿ, ಡಾ. ಧರ್ಮೇಶ ಹಾಗೂ ಡಾ. ಸ್ಪೂರ್ತಿ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡ 3ಡಿ ಕಸ್ಟಮೈಜ್ಡ್ ಟೈಟಾನಿಯಂ ಇಂಪ್ಲಾಂಟ್ ಅಳವಡಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿತು. ಮುಂದಿನ ದಿನಗಳಲ್ಲಿ ಸಣ್ಣದೊಂದು ಶಸ್ತ್ರಚಿಕಿತ್ಸೆ ಮಾಡಿದರೆ ಮೊದಲಿನ ಹಾಗೆ ಕಣ್ಣುಗಳು ಕಾಣಿಸಲಿವೆ‌ ಎಂದರು.

ADVERTISEMENT

ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ.ಡಾ. ಮಂಜುನಾಥ ಬಿಜಾಪುರ, ಡಾ. ರಾಜಶೇಖರ ದ್ಯಾಬೇರಿ, ಡಾ. ವಸಂತ ಕಟ್ಟೀಮನಿ ಹಾಗೂ ಡಾ. ಅನುರಾಧ ನಾಗನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.