ಮೂರಂತಸ್ತಿನ ಕಟ್ಟಡ ಏರಿದ್ದ ಆರೋಪಿಯನ್ನು ಉಪಾಯದಿಂದ ಕೆಳಗಿಳಿಸಿ ಕರೆತಂದ ಪೊಲೀಸರು
ಧಾರವಾಡ: ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕರೆದೊಯ್ಯುವಾಗ ತಪ್ಪಿಸಿಕೊಂಡು ಮೂರಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ಉಪಾಯದಿಂದ
ಕೆಳಗಿಳಿಸಿದ್ದಾರೆ.
ಪ್ರಕರಣವೊಂದರಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿ ವಿಜಯ್ ಉಣಕಲ್ ಎಂಬಾತನನ್ನು ಅಣ್ಣಿಗೇರಿ ಪೊಲೀಸರು ಭಾನುವಾರ ಧಾರವಾಡಕ್ಕೆ ಕರೆತರುವಾಗ ಆತ ತಪ್ಪಿಸಿಕೊಂಡಿದ್ದ. ಮಲಪ್ರಭಾ ನಗರದಲ್ಲಿ ಕಟ್ಟಡ ಏರಿ,
ನ್ಯಾಯಾಧೀಶರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದ್ದ. ತಪ್ಪಿದರೆ ಕಟ್ಟಡ
ದಿಂದ ಬಿದ್ದು ಸಾಯುವುದಾಗಿ ಹೆದರಿಸಿದ್ದ. ಪೊಲೀಸರು ಉಪಾಯವಾಗಿ ಆತನನ್ನು ಕೆಳಗಿಳಿಸಿ ಜೈಲಿಗೆ ಕಳಿಸಿದ್ದಾರೆ.
‘ಕೋಟ್ ಧರಿಸಿದ್ದ ಅತಿಥಿ
ಉಪನ್ಯಾಸಕರೊಬ್ಬರನ್ನು ಆರೋಪಿಗೆ ತೋರಿಸಿ ನ್ಯಾಯಾಧೀಶರು ಬಂದಿರುವುದಾಗಿ ಹೇಳಿ ಕೆಳಕ್ಕೆ ಇಳಿಸಿದೆವು’ ಎಂದು ಎಸಿಪಿ ಪ್ರಶಾಂತ ಸಿದ್ಧನಗೌಡರ ತಿಳಿಸಿದರು.
ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.