ADVERTISEMENT

ತಾಳಿಕೋಟೆ | ಲಾಟರಿ ಮೂಲಕ ಮನೆ ಹಂಚಿಕೆ: ಅಧಿಕಾರಿಗಳ ಲಿಖಿತ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:13 IST
Last Updated 2 ಜೂನ್ 2025, 15:13 IST
ತಾಳಿಕೋಟೆ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎನ್.ಎಸ್.ಮಸಳಿ, ಪಿಡಿಒ ಬಿ.ಎಂ.ಸಾಗರ ಭೇಟಿನೀಡಿ ಹೋರಾಟಗಾರರೊಂದಿಗೆ ಚರ್ಚಿಸಿದರು
ತಾಳಿಕೋಟೆ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎನ್.ಎಸ್.ಮಸಳಿ, ಪಿಡಿಒ ಬಿ.ಎಂ.ಸಾಗರ ಭೇಟಿನೀಡಿ ಹೋರಾಟಗಾರರೊಂದಿಗೆ ಚರ್ಚಿಸಿದರು   

ತಾಳಿಕೋಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಜಿಲ್ಲಾ ಘಟಕ ಹಾಗೂ ಸ್ಥಳೀಯ ಕಲಕೇರಿ ಗ್ರಾಮ ಘಟಕದ ವತಿಯಿಂದ ಕಲಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸೋಮವಾರ ಎಂಟು ದಿನ ಪೂರೈಸಿತು.

ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಇಒ ಎನ್.ಎಸ್. ಮಸಳಿ, ಪಿಡಿಒ ಬಿ.ಎಂ. ಸಾಗರ ಅವರು, ‘ಕಲಕೇರಿ ಗ್ರಾಮ ಪಂಚಾಯಿತಿಗೆ ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮಂಜೂರಾಗಿರುವ ಹೆಚ್ಚುವರಿ 450 ಮನೆಗಳನ್ನು ಹೋರಾಟಗಾರರ ಬೇಡಿಕೆಯಂತೆ ಮುಂದಿನ ಗ್ರಾಮಸಭೆಯಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು’ ಎಂದು ಲಿಖಿತವಾಗಿ ನೀಡಿದರು.

ಆದರೆ, ಬೇಡಿಕೆಗಳಿಗೆ ತಾತ್ವಿಕ ಅಂತ್ಯ ಸಿಗುವವರೆಗೆ ಅಹೋರಾತ್ರಿ ಹೋರಾಟ ಮುಂದುವರೆಯುತ್ತದೆ ಎಂದು ಹೋರಾಟಗಾರರು ತಿಳಿಸಿದರು.

ADVERTISEMENT

ಸೋಮಶೇಖರ ಬಡಿಗೇರ, ಡಿಎಸ್ಎಸ್ ವಲಯ ಸಂಚಾಲಕ ಇರಗಂಟೆಪ್ಪ ಬಡಿಗೇರ, ಸಿದ್ದು ಪೂಜಾರಿ, ಮಲ್ಲು ಪೂಜಾರಿ, ಜೈಭೀಮ ಉತಾಳೆ, ಸಂಜು ಉತಾಳೆ, ಸೋಮು ಹೊಸಮನಿ, ದೇವು ವಡ್ಡರ, ಬಸವರಾಜ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.