ADVERTISEMENT

ವಿಠ್ಠಲ, ರುಕುಮಾಯಿ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:22 IST
Last Updated 3 ಮೇ 2022, 4:22 IST
ಅಳ್ನಾವರ ಸಮೀಪದ ಅರವಟಗಿಯಲ್ಲಿ ವಿಠ್ಠಲ ರುಕಮಾಯಿ ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು
ಅಳ್ನಾವರ ಸಮೀಪದ ಅರವಟಗಿಯಲ್ಲಿ ವಿಠ್ಠಲ ರುಕಮಾಯಿ ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು   

ಅಳ್ನಾವರ: ತಾಲ್ಲೂಕಿನ ಅರವಟಗಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ವಿಠ್ಠಲ ಮಂದಿರದ ಉದ್ಘಾಟನೆ ಮತ್ತು ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಯುಕ್ತ ವಿಠ್ಠಲ, ರುಕುಮಾಯಿ, ಗಣಪತಿ, ಜ್ಞಾನೇಶ್ವರ, ತುಕಾರಾಮ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು.

ಗ್ರಾಮದ ಮುಖ್ಯ ಬೀದಿಯಲ್ಲಿ ತೆರೆದ ಟ್ರ್ಯಾಕ್ಟರ್ ನಲ್ಲಿ ಮೂರ್ತಿ ಮೆರವಣಿಗೆ ಹೊರಟಿತು. ಡೊಳ್ಳಿನ ಸದ್ದು, ಗೌಳಿ ಜನಾಂಗದವರ ಸಾಂಪ್ರದಾಯಿಕ ನೃತ್ಯ, ಭಜನೆಯೊಂದಿಗೆ ಭಕ್ತರು ಸಾಗಿದರು. ಪೂರ್ಣ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿರ ಮಹಿಳೆಯರು ಮೆರಗು ತಂದರು.

ಸಂತರಾದ ವಿಠ್ಠಲರಾವ ಕಾಟೇನವರ ಅವರಿಂದ ಪೋತಿ ಸ್ಥಾಪನೆ, ಗ್ರಂಥಗಳ ಪೂಜೆ, ಪ್ರವಚನ ನಾಮಜಪ, ಹರಿಪಾಠ,ಕೀರ್ತನೆ, ಜಾಗರಣೆ ,ಶಿವಭಜನೆ ,ಕಾಕಡಾರತಿ, ಸಾಮೂಹಿಕ ಜ್ಞಾನೇಶ್ವರಿ ಪಾರಾಯಣ ನಡೆಯಿತು.

ADVERTISEMENT

ಮಂಗಳವಾರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಕಾಂಗ್ರೆಸ್‌ ಮುಖಂಡ ಸಂತೋಷ್ ಲಾಡ್ ಗ್ರಾಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಂಗನಾಥ ಹುರಳಿ, ವಿಠ್ಠಲರಾವ ಕಾಟೇನವರ, ದೇವೇಂದ್ರಪ್ಪ ಓಲೇಕಾರ, ಗಣೇಶ ಪಾರಕ್ಕನವರ, ಬಸವರಾಜ ದೊಡ್ಡವಾಡ, ಪುಂಡಲಿಕಪ್ಪ ಭಟ್ಟಂಗಿ, ವೀರಪ್ಪ ಮ್ಯಾಗೇರಿ, ಮಂಜುನಾಥ ಘೋರ್ಪಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.