ADVERTISEMENT

ಶಿಕ್ಷಕರ ಕೈಯಲ್ಲಿ ಮಕ್ಕಳ ಭವಿಷ್ಯ: ಪೂರ್ವಚಾರಿ ಸುತಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 5:40 IST
Last Updated 16 ಫೆಬ್ರುವರಿ 2022, 5:40 IST
ಗುಡಗೇರಿ ಗ್ರಾಮದಲ್ಲಿ ಐ. ಪದ್ಮಲತಾ, ಅನೀಲ ಎಸ್ ಮುರಗಿ ಹಾಗೂ ಎ.ಎಸ್.ಹಿರೇಮಠ ಅವರನ್ನು ಸನ್ಮಾನಿಸಲಾಯಿತು
ಗುಡಗೇರಿ ಗ್ರಾಮದಲ್ಲಿ ಐ. ಪದ್ಮಲತಾ, ಅನೀಲ ಎಸ್ ಮುರಗಿ ಹಾಗೂ ಎ.ಎಸ್.ಹಿರೇಮಠ ಅವರನ್ನು ಸನ್ಮಾನಿಸಲಾಯಿತು   

ಗುಡಗೇರಿ: ಶಿಕ್ಷಕ ಕೆಲಸ ಪವಿತ್ರ ವೃತ್ತಿಯಾಗಿದ್ದು ಮಕ್ಕಳನ್ನು ತಿದ್ದಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿ ಇದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಪೂರ್ವಚಾರಿ ಸುತಾರ ಹೇಳಿದರು.

ಗುಡಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೆಜಿಎಸ್‌ನಲ್ಲಿ ಹಮ್ಮಿಕೊಂಡಿದ್ದ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿ ಐ.ಪದ್ಮಲತಾ, ವರ್ಗಾವಣೆಯಾದ ಅನೀಲ ಎಸ್ ಮುರಗಿ ಹಾಗೂ ವರ್ಗಾವಣೆಯಾಗಿ ಬಂದ ಶಿಕ್ಷಕಿ ಎ.ಎಸ್. ಹಿರೇಮಠ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಯ ಪ್ರಧಾನ ಗುರು ಎ.ಎನ್‌. ಶಕುಂತಲಾ ಮಾತನಾಡಿ ’ಪದ್ಮಲತಾ ಅವರು ತಮ್ಮ ಸೇವಾ ಅವಧಿಯಲ್ಲಿ ಎಲ್ಲರೊಂದಿಗೆ ಬೆರೆತು ಮಕ್ಕಳಿಗೆ ಉತ್ತಮ ಜ್ಞಾನ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಪಕ್ಕೀರೇಶ ಬೂದಿಹಾಳ, ಮಾಜಿ ಯೋಧ ಶಿವಲಿಂಗಪ್ಪ ತರ್ಲಘಟ್ಟ, ನಿಂಗನಗೌಡ ಶಾಲಮನಿ, ನಿಂಗಮ್ಮ ಬಾರಕೇರ, ಶಿಕ್ಷಕರಾದ ಆರ್.ಎಸ್. ಮೂರನಾಳ, ಆರ್.ಎಸ್.ಮುಳಗುಂದ, ಎಸ್‌.ಎನ್‌. ನಿಟ್ಟಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.