ADVERTISEMENT

ಪಾಲಕರ ತ್ಯಾಗ ದೊಡ್ಡದು: ಹೊರಟ್ಟಿ

‘ಗುರು ಕಾರುಣ್ಯ’ ವಚನ ಪುಸ್ತಕ ಬಿಡುಗಡೆ, ಸನ್ಮಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:12 IST
Last Updated 27 ಜುಲೈ 2022, 4:12 IST
ಹುಬ್ಬಳ್ಳಿಯ ಜೆ.ಸಿ. ನಗರದ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ‌ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯೆ ಡಾ. ಅಕ್ಕಮಹಾದೇವಿ ನಾಡಗೌಡ ಅವರ ‘ಗುರು ಕಾರುಣ್ಯ’ ವಚನ ಪುಸ್ತಕವನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು. ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಅರವಿಂದ ಕುಬಸದ, ಡಾ. ಲಿಂಗರಾಜ ಅಂಗಡಿ ಇದ್ದಾರೆ
ಹುಬ್ಬಳ್ಳಿಯ ಜೆ.ಸಿ. ನಗರದ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ‌ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯೆ ಡಾ. ಅಕ್ಕಮಹಾದೇವಿ ನಾಡಗೌಡ ಅವರ ‘ಗುರು ಕಾರುಣ್ಯ’ ವಚನ ಪುಸ್ತಕವನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು. ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಅರವಿಂದ ಕುಬಸದ, ಡಾ. ಲಿಂಗರಾಜ ಅಂಗಡಿ ಇದ್ದಾರೆ   

ಹುಬ್ಬಳ್ಳಿ: ‘ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರ ತ್ಯಾಗ ದೊಡ್ಡದು. ತಂದೆ–ತಾಯಿ ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮಕ್ಕಳು ಮುನ್ನಡೆದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಜೆ.ಸಿ. ನಗರದ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಅವ್ವ ಸೇವಾ ಟ್ರ‌ಸ್ಟ್‌ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ, ‘ಗುರು ಕಾರುಣ್ಯ’ ವಚನ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪಾಲಕರು ತಮ್ಮ ಆಸೆ–ಆಕಾಂಕ್ಷೆಗಳನ್ನು ಬದಿಗಿಡುತ್ತಾರೆ. ಮಕ್ಕಳು ಏನಾದರೂ ಸಾಧನೆ ಮಾಡಿದಾಗ ಮಾತ್ರಆ ತ್ಯಾಗ ಸಾರ್ಥಕವಾಗುತ್ತದೆ’ ಎಂದರು.

‘ಗುರು ಕಾರುಣ್ಯ’ ವಚನ ಪುಸ್ತಕದ ಲೇಖಕಿ ಡಾ. ಅಕ್ಕಮಹಾದೇವಿ ನಾಡಗೌಡ ಮಾತನಾಡಿ, ‘ಈ ಕೃತಿ ರಚನೆಗೆ ಜ್ಞಾನಯೋಗ ಮಠದ ಸಿದ್ದೇಶ್ವರ ಸ್ವಾಮೀಜಿ ಹಾಗೂ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಗಳೇ ಪ್ರೇರಣೆ’ ಎಂದರು.ಸಾಹಿತಿ ಡಾ. ಶಾಂತಾ ಇಮ್ರಾಪುರ ಕೃತಿಯನ್ನು ಪರಿಚಯಿಸಿದರು.

ADVERTISEMENT

ಹೊರಟ್ಟಿ ಹಾಗೂ ಪತ್ನಿ ಹೇಮಲತಾ ಅವರನ್ನು ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಸ್ವಾಮೀಜಿ ಸನ್ಮಾನಿಸಿದರು. ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಗೀತಾ ಭಟ್, ದ್ವಿತೀಯ ರ‍್ಯಾಂಕ್ ಪಡೆದಶೋಭಾ ಜಾಬಿನ, ತೃತೀಯ ರ‍್ಯಾಂಕ್ ಪಡೆದ ಸಂಪದಾ ಜೋಶಿಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಸಾನಿಕಾ ರವಿಶಂಕರ ಅವರನ್ನು ಅವ್ವ ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು.

ಎಸ್‌ಜೆಎಂವಿ ಸಂಘದ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿದ್ದರು.ಅವ್ವ ಟ್ರಸ್ಟ್‌ ಕಾರ್ಯದರ್ಶಿ ಶಶಿ ಸಾಲಿ, ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ, ಲಿಂಗರಾಜ ಇಂಗಳಗಿ, ಗುರುರಾಜ ನವಲಗುಂದ, ಡಾ. ಸುಪ್ರಿಯಾ ಮಲಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.