ADVERTISEMENT

ಚಿನ್ನಾಭರಣ ಅಂಗಡಿಯಲ್ಲಿ ಬೆಳ್ಳಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:42 IST
Last Updated 23 ಆಗಸ್ಟ್ 2019, 9:42 IST

ಹುಬ್ಬಳ್ಳಿ: ಗೋಕುಲ ರಸ್ತೆಯ ಅಪೂರ್ವನಗರದ ಸುಭಾಸ ಆರ್ಕೇಡ್‌ನಲ್ಲಿರುವ ಚಿನ್ನಾಭರಣ ಮಳಿಗೆಗೆ ನುಗ್ಗಿರುವ ಕಳ್ಳರು, ₹1.77 ಲಕ್ಷ ಮೌಲ್ಯದ ಚಿನ್ನದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ಚಂದ್ರಕಾಂತ ತಿಮ್ಮಪ್ಪ ರೇವಣಕರ ಎಂಬುವರಿಗೆ ಅಂಗಡಿ ಸೇರಿದೆ. ಆ. 20 ಮತ್ತು 21ರಂದು ಅಂಗಡಿಯನ್ನು ಮುಚ್ಚಿದ್ದಾಗ, ಕಳ್ಳರು ಶಟರ್ ಅನ್ನು ಮುರಿದು ಕೃತ್ಯ ಎಸಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ತಿಳಿಸಿದರು.

ವ್ಯಕ್ತಿ ಆತ್ಮಹತ್ಯೆ

ADVERTISEMENT

ಹುಬ್ಬಳ್ಳಿ: ಇಲ್ಲಿನ ಉಣಕಲ್ ದುರ್ಗದ ಓಣಿಯಲ್ಲಿ ಲಕ್ಷ್ಮಣ ಯಲ್ಲಪ್ಪ ಮಾರಡಗಿ (38) ಎಂಬುವರು ಮದ್ಯದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಅವರು ತಾಯಿಯೊಂದಿಗೆ ವಾಸವಾಗಿದ್ದರು. ‌ಇಬ್ಬರನ್ನು ಮದುವೆಯಾಗಿದ್ದ ಅವರನ್ನು ಪತ್ನಿಯರು ತೊರೆದಿದ್ದರು. ಮಕ್ಕಳು ಸಹ ಇರಲಿಲ್ಲ.

ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಲಕ್ಷ್ಮಣ ಅವರು ಮಧ್ಯಾಹ್ನದ ನೇಣು ಹಾಕಿಕೊಂಡಿದ್ದಾರೆ. ಸಂಜೆ ಅವರ ತಾಯಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: ಬಂಧನ

ಇಲ್ಲಿನ ಮೌಲಾ ಅಲಿ ಜೋಪಡಿ ಬಳಿ ಜೂಜಾಟವಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದರುವ ಸಿಸಿಬಿ ಪೊಲೀಸರು, ಜಮೀರ ಹಾಗೂ ರಫೀಕ ಇಮಾಮಸಾಬ್‌ನನ್ನು ಬಂಧಿಸಿ, ₹10,180 ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಕಳ್ಳತನ

ದೇಶಪಾಂಡೆನಗರದಲ್ಲಿರುವ ರಾಘವೇಂದ್ರ ಮಠದ ಬಳಿ ಮಮತಾ ಎಂಬುವರು ನಿಲ್ಲಿಸಿದ್ದ ಸ್ಕೂಟರ್ ಅನ್ನು ಆ. 18ರಂದು ಕಳವಾಗಿದೆ. ಅಂದು ಮಧ್ಯಾಹ್ನ ಮಠಕ್ಕೆ ಬಂದಿದ್ದ ಮಮತಾ, ಸ್ಕೂಟರ್ ಅನ್ನು ಪಕ್ಕದ ರಸ್ತೆ ಬದಿ ನಿಲ್ಲಿಸಿದ್ದರು. ಮಠಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಬರುವಷ್ಟರಲ್ಲಿ ಕಳ್ಳರು ಸ್ಕೂಟರ್ ಕದ್ದೊಯ್ದಿದ್ದಾರೆ ಕಳವಾಗಿತ್ತು. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ ವಸೂಲಿ

ಅವಳಿನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪೊಲೀಸರು, 1,744 ಪ್ರಕರಣ ದಾಖಲಿಸಿ ₹2.72 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.