ಧಾರವಾಡ: ತಾಲ್ಲೂಕಿನ ಯರಿಕೊಪ್ಪ ಗ್ರಾಮದ ಬಸಪ್ಪ ಸೂರ್ಯವಂಶಿ ಅವರ ಜಮೀನಲ್ಲಿದ್ದ ಮೊಬೈಲ್ ಗೋಪುರದ ಎರಡು ರೆಡಿಯೊ ಹೆಡ್, ಬ್ಯಾಂಡ್ (ಅಂದಾಜು ಮೌಲ್ಯ ₹ 1.31 ಲಕ್ಷ) ಕಳವು ಪ್ರಕರಣ ಭೇದಿಸಿರುವ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನ ಶಾಸ್ತ್ರಿನಗರದ ಮೊಹಮ್ಮದ್ ಜುನೇದ್, ಮನಜೂರನಗರದ ಮುಸ್ತಕಿಮ್ ಹಾಗೂ ದೆಹಲಿಯ ದಯಾಲಪುರದ ಪರ್ಮಾನ ಬಂಧಿತರು. ರೆಡಿಯೊ ಹೆಡ್‌ಗಳು, ಬ್ಯಾಂಡ್ ಮತ್ತು ದ್ವಿಚಕ್ರವಾಹನ ವಶಕ್ಕೆ ಪಡೆದಿದ್ಧಾರೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ಧಾರೆ.
ಸೆ.23ರಂದು ಕಳವು ನಡೆದಿತ್ತು. ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಇನ್‌ಸ್ಪೆಕ್ಟರ್ ಎಸ್.ಎಸ್. ಕಮತಗಿ ಹಾಗೂ ಪಿಎಸ್‌ಐಗಳಾದ ಪ್ರವೀಣ ಕೋಟಿ,ಬಿ.ಆರ್. ಬಂಕಾಪೂರ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ಧಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.