ADVERTISEMENT

ಹುಬ್ಬಳ್ಳಿ: ₹ 2.41 ಲಕ್ಷ ಮೌಲ್ಯದ ಐಫೋನ್‌ ಕಳವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 6:28 IST
Last Updated 10 ಜನವರಿ 2022, 6:28 IST

ಹುಬ್ಬಳ್ಳಿ: ಇಲ್ಲಿನ ಬಂಕಾಪುರ ಚೌಕದ ಬ್ಲೂ ಲಾಜಿಸ್ಟಿಕ್‌ನ ಗೋದಾಮಿನಿ ಕೀಲಿ ತೆಗೆದು, ₹2.41 ಲಕ್ಷ ಮೌಲ್ಯದ ಎರಡು ಐಫೋನ್‌ (ಒಂದು ಬಾಕ್ಸ್‌) ಕಳವು ಮಾಡಲಾಗಿದೆ.

ಬೆಂಗಳೂರಿನಿಂದ ಎಂಟು ಐಫೋನ್‌ ಬಾಕ್ಸ್‌ ಪಾರ್ಸೆಲ್‌ ಬಂದಿತ್ತು. ಕಂಪನಿಯ ಇಬ್ಬರು ಸಿಬ್ಬಂದಿ ಅದನ್ನು ಸ್ವೀಕರಿಸಿ, ಗೋದಾಮಿನಲ್ಲಿ ಇಟ್ಟಿದ್ದರು. ನಂತರ ಗೋದಾಮಿಗೆ ಬೀಗ ಹಾಕಿ, ಅದರ ಕೀಲಿಯನ್ನು ಅಲ್ಲಿಯೇ ಇರುವ ಮೊಳೆಗೆ ತೂಗು ಹಾಕಿ ಹೋಗಿದ್ದರು. ಸಂಜೆ ವೇಳೆ ಬಂದು ನೋಡಿದಾಗ ಐಫೋನ್‌ ಬಾಕ್ಸ್‌ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಕಸಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಕ್ಕೆ ಬಾರದೆ ಹಣ ವರ್ಗಾವಣೆ: ಅಣ್ಣಿಗೇರಿ ತಾಲ್ಲೂಕಿನ ನಲವಾಡಿ ಗ್ರಾಮದ ನಾಗಪ್ಪ ನರಗುಂದ ಅವರ ಬ್ಯಾಂಕ್‌ ಖಾತೆಯಿಂದ ₹97 ಸಾವಿರ ಅವರ ಗಮನಕ್ಕೆ ಬಾರದೆ ವಂಚಕನೊಬ್ಬ ಎಟಿಎಂನಿಂದ ಡ್ರಾ ಮಾಡಿಕೊಂಡಿದ್ದಾನೆ.

ADVERTISEMENT

ನಾಗಪ್ಪ ಅವರು ಬ್ಯಾಂಕ್‌ ಖಾತೆ ಮಾಹಿತಿ ಹಾಗೂ ಎಟಿಎಂ ಕಾರ್ಡ್‌ ನಂಬರ್‌, ಪಾಸವರ್ಡ್‌ ಯಾವುದನ್ನೂ ಹಂಚಿಕೊಂಡಿಲ್ಲ. ಅಲ್ಲದೆ, ಆನ್‌ಲೈನ್‌ ಬ್ಯಾಂಕಿಂಗ್‌ ಸೌಲಭ್ಯವನ್ನೂ ಹೊಂದಿರಲಿಲ್ಲ. ಹೀಗಿದ್ದಾಗಲೂ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.