ADVERTISEMENT

ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ಅವಶ್ಯವಿಲ್ಲ: ಮಲ್ಲಿಕಾರ್ಜುನ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:53 IST
Last Updated 23 ಫೆಬ್ರುವರಿ 2020, 10:53 IST

ಹುಬ್ಬಳ್ಳಿ: ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ ಅವಶ್ಯವಿಲ್ಲ ಎಂದು ಘಟಪ್ರಭಾ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಈಗಿನ‌ ಗುರುಗಳಾದ ಮೂಜಗು ಅವರು ಆರೋಗ್ಯವಾಗಿದ್ದಾರೆ.‌ ಮಠದ ಅಭಿವೃದ್ಧಿಗೆ ಶ್ರಮಿಸಲು ಸಮರ್ಥರಿದ್ದಾರೆ. ಈ ಕಾರಣದಿಂದ ಉತ್ತರಾಧಿಕಾರಿ ನೇಮಕ ಅಗತ್ಯವಿಲ್ಲ. ಮಠದ ಉತ್ತರಾಧಿಕಾರ ವಿವಾದ ನ್ಯಾಯಾಲದಲ್ಲಿದೆ. ಅಲ್ಲಿಯೇ ಬಗಿಹರಿಯಲಿ. ನಾನೇ ಅಧಿಕೃತ ಉತ್ತರಾಧಿಕಾರಿ. ಹಿಂದಿನ ಸ್ವಾಮೀಜಿ ಲಿಂ ಮೂಜಗಂ ಹಾಗೂ ಈಗಿನ ಸ್ವಾಮೀಜಿ ಮೂಜಗು 2012ರಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದರು.

ನನ್ನ ಬಳಿ ಕಾಗದಗಳಿರುವುದರಿಂದ ನ್ಯಾಯಾಲಯ ಬಿಟ್ಟು ಬೇರೆ ರೀತಿಯಿಂದ ಪ್ರಯತ್ನ ಪಟ್ಟರೆ ನಮ್ಮ ಭಕ್ತರೂ ಇದ್ದಾರೆ. ನಾವೂ ತಕ್ಕ ಉತ್ತರ ಕೊಡುತ್ತೇವೆ ಎಂದರು.

ADVERTISEMENT

ಇದೆ ಸಂದರ್ಭದಲ್ಲಿ ನೋಂದಣಿ ಪತ್ರಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.