ADVERTISEMENT

ಹುಬ್ಬಳ್ಳಿ: ರೈಲು ಸಂಚಾರ ಭಾಗಶಃ ರದ್ದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:16 IST
Last Updated 25 ಜನವರಿ 2026, 5:16 IST
<div class="paragraphs"><p> ರೈಲು ಸಂಚಾರ ವ್ಯತ್ಯಯ</p></div>

ರೈಲು ಸಂಚಾರ ವ್ಯತ್ಯಯ

   

ಹುಬ್ಬಳ್ಳಿ: ಹುಬ್ಬಳ್ಳಿ ಯಾರ್ಡ್‌ನಲ್ಲಿ ಸ್ವಿಚ್ ನವೀಕರಣ ಕಾಮಗಾರಿ ಹಿನ್ನೆಲೆ ಜ.27ರಂದು ರೈಲುಗಳ ಸಂಚಾರ ಭಾಗಶಃ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ವಿಜಯಪುರ– ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (07330) ಗದಗ ಮತ್ತು ಹುಬ್ಬಳ್ಳಿ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿ ಬದಲಿಗೆ ಗದಗದಲ್ಲಿ ಅಂತ್ಯಗೊಳ್ಳಲಿದೆ. 

ADVERTISEMENT

ಹುಬ್ಬಳ್ಳಿ– ವಿಜಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (07329) ಹುಬ್ಬಳ್ಳಿ ಮತ್ತು ಗದಗ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿ ಬದಲು ಗದಗದಿಂದ ಪ್ರಯಾಣ ಆರಂಭಿಸಲಿದೆ.

ಪ್ರಯೋಗಾತ್ಮಕ ನಿಲುಗಡೆ: ಹುಬ್ಬಳ್ಳಿ ವಿಭಾಗದ ಗೋಕಾಕ್ ರೋಡ್ ನಿಲ್ದಾಣದಲ್ಲಿ ಹುಬ್ಬಳ್ಳಿ– ದಾದರ್ ಎಕ್ಸ್‌ಪ್ರೆಸ್ ರೈಲು (17317) ಹಾಗೂ ದಾದರ್ – ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (17318) ರೈಲುಗಳು ಜ.26ರಿಂದ ಒಂದು ನಿಮಿಷ ಪ್ರಯೋಗಾತ್ಮಕ ನಿಲುಗಡೆ ಹೊಂದಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.