ADVERTISEMENT

ಸಂಶಿ-ಯಲವಿಗಿ ರೈಲು ಮಾರ್ಗ ಕಾಮಗಾರಿ: ಸಂಚಾರ ರದ್ದು, ಇಲ್ಲಿದೆ ಬದಲಾದ ಮಾರ್ಗ ವಿವರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 2:32 IST
Last Updated 15 ಫೆಬ್ರುವರಿ 2022, 2:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಸಂಶಿ-ಯಲವಿಗಿ ರೈಲು ಮಾರ್ಗದಲ್ಲಿ ಕಾಮಗಾರಿ ಫೆ.18ರಿಂದ 27ರವರೆಗೆ ನಡೆಯಲಿದ್ದು, ಕೆಲವು ರೈಲುಗಳ ಸಂಚಾರ ಪೂರ್ಣ ಹಾಗೂ ಭಾಗಶಃ ರದ್ದು ಪಡಿಸಲಾಗಿದೆ.

ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ– ಚಿತ್ರದುರ್ಗ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲು (07347), ಚಿತ್ರದುರ್ಗ- ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ(07348) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅರಸೀಕೆರೆ ನಿಲ್ದಾಣದಿಂದ ಹೊರಡುವ ಅರಸೀಕೆರೆ-ಸಿದ್ಧಾರೂಢ ಸ್ವಾಮೀಜಿ ವಿಶೇಷ ಪ್ಯಾಸೆಂಜರ್ ರೈಲು (07367); ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ- ಅರಸೀಕೆರೆ (07368) ರೈಲಿನ ಸಂಚಾರವನ್ನು ಫೆ.18 ರಿಂದ 25ರವರೆಗೆ ರದ್ದುಗೊಳಿಸಲಾಗಿದೆ.

ADVERTISEMENT

ಕೆ.ಎಸ್.ಆರ್. ಬೆಂಗಳೂರು-ಸಿದ್ಧಾರೂಢ ಸ್ವಾಮೀಜಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ (12079)

ಹಾಗೂ ಅದೇ ರೀತಿ ಹುಬ್ಬಳ್ಳಿ–ಬೆಂಗಳೂರು (12080) ರೈಲಿನ ಹಾವೇರಿ–ಹುಬ್ಬಳ್ಳಿ ನಿಲ್ದಾಣಗಳ ನಡುವಿನ ಸಂಚಾರ ರದ್ದು ಮಾಡಲಾಗಿದೆ. ಹಾವೇರಿಯಿಂದ ಹೊರಡಲಿದೆ.

ಅರಸೀಕೆರೆ- ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ರಾಣೆಬೆನ್ನೂರು (07367) ರೈಲು ಹಾಗೂ ಹುಬ್ಬಳ್ಳಿ–ಅರಸೀಕೆರೆ (07368) ರೈಲು ರಾಣೆಬೆನ್ನೂರು–ಹುಬ್ಬಳ್ಳಿ ನಡುವೆ ಫೆ.19 ರಿಂದ 24, ಫೆ.26, 27 ರಂದು ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಚ್ಚುವೆಲಿ–ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ಎಕ್ಸ್‌ಪ್ರೆಸ್‌ ರೈಲು (12778) ಫೆ.17 ರಿಂದ 24ರವರೆಗೆ ಹಾವೇರಿ–ಹುಬ್ಬಳ್ಳಿ ನಡುವೆ ಸಂಚರಿಸುವುದಿಲ್ಲ.

ಸಿದ್ಧಾರೂಢ ಸ್ವಾಮೀಜಿ–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (16544) ಹಾವೇರಿ, ಹರಿಹರದ ಬದಲಾಗಿದೆ ಹುಬ್ಬಳ್ಳಿ, ಹೊಸಪೇಟೆ, ಕೊಟ್ಟೂರು, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.