ADVERTISEMENT

ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:17 IST
Last Updated 11 ಆಗಸ್ಟ್ 2020, 14:17 IST
   

ಹುಬ್ಬಳ್ಳಿ: ನಗರದ ವಿವಿಧ ಠಾಣೆಗಳ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು (ಸಿವಿಲ್‌) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಹಳೇ ಹುಬ್ಬಳ್ಳಿ ಠಾಣೆಯ ಮಾರುತಿ ಎಸ್‌. ಗುಲಾರಿ ರಾಜ್ಯ ಗುಪ್ತವಾರ್ತೆಗೆ, ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಯ ರತನ ಕುಮಾರ್‌ ಜಿರಗಾಳ ನಗರದ ಕಸಬಾಪೇಟೆ ಠಾಣೆಗೆ, ಜಿಲ್ಲಾ ಅಪರಾಧ ತನಿಖಾ ಬ್ಯುರೊದಲ್ಲಿದ್ದ ಮಲ್ಲಪ್ಪ ಎಚ್‌. ಬಿದರಿ ಲೋಕಾಯುಕ್ತಕ್ಕೆ, ಕಸಬಾಠಾಣೆ ಠಾಣೆಯ ಶ್ಯಾಮರಾಜ್‌ ಎಸ್‌. ಸಜ್ಜನ ಹುಬ್ಬಳ್ಳಿ–ಧಾರವಾಡ ನಗರ ಸಿಸಿಬಿಗೆ ವರ್ಗಾವಣೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಕಿತ್ತೂರು ವೃತ್ತದಲ್ಲಿದ್ದ ಶ್ರೀಕಾಂತ ಎಫ್‌. ತೊಟಗಿ ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಗೆ, ಚನ್ನಪಟ್ಟಣದ ಕೆಎಸ್‌ಪಿಟಿಎಸ್‌ನ (ಕಚೇರಿ ಕೆಲಸದ ಮೇಲೆ ಧಾರವಾಡ ಪಿಟಿಎಸ್‌ನಲ್ಲಿದ್ದರು) ವೀರಣ್ಣ ಎಂ. ಹಳ್ಳಿ ಧಾರವಾಡ ಜಿಲ್ಲಾ ಅಪರಾಧ ತನಿಖಾ ಬ್ಯುರೊಕ್ಕೆ, ಲೋಕಾಯುಕ್ತದಲ್ಲಿದ್ದ ಶಿವಪ್ಪ ಎಸ್‌. ಕಮತಗಿ ಅವರನ್ನು ಹಳೇ ಹುಬ್ಬಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.