ADVERTISEMENT

ಹುಬ್ಬಳ್ಳಿ: 13 ಕನ್ನಡ ಕೃತಿಗಳಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:26 IST
Last Updated 6 ಫೆಬ್ರುವರಿ 2024, 15:26 IST

ಹುಬ್ಬಳ್ಳಿ: ‘2023ನೇ ಸಾಲಿನ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗೆ 13 ಜನ ಬರಹಗಾರರ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ. 

ದೀಪಿಕಾ ಚಾಟೆಯವರ ’ಶ್ರೀರಾಮಚಂದ್ರ ಚರಿತೆ’, ಶಕುಂತಲಾ ಪ್ರ.ಬರಗಿಯವರ ‘ಶಾಲ್ಮಲ‘, ಸಂಗಮೇಶ ತಮ್ಮನಗೌಡ್ರ ಅವರ ‘ಬೇಂದ್ರೆ ಭಾವ ಬೆಸುಗೆ‘ (ಭಾಗ 1 ಮತ್ತು 2), ಶ್ರೀದೇವಿ ಕೆರೆಮನೆಯವರ ‘ಕಡಲು ಕಾನನದ ನಡುವೆ‘, ವಿದ್ಯಾ ಶಿರಹಟ್ಟಿ ಅವರ ‘ನೆನಪು ಗರಿಬಿಚ್ಚಿದಾಗ‘, ಸಮೀರ ಹಾದಿಮನಿ ಅವರ ‘ನಗೆ ಗುಳಿಗೆ‘, ಪದ್ಮಜಾ ಜಯತೀರ್ಥ ಉಮರ್ಜಿ ಅವರ ‘ಭೃಂಗದ ಬೆನ್ನೇರಿ’, ರಂಜನೀ ಕೀರ್ತಿ ಅವರ ‘ಪಸಾ’,  ಸರಸ್ವತಿ ಟಿ.ಎನ್ ಅವರ ‘ಶಾರಿಸುತೆಯ ಟರ್ಕಿ ಪ್ರವಾಸ ಕಥೆ’, ಮುರುಗೇಶ ಸಂಗಮ ಅವರ ‘ಬಸವ ಜನ್ಮಸ್ಥಳ ಬಸವನ ಬಾಗೇವಾಡಿಯ ಕ್ಷೇತ್ರ ಚರಿತ್ರೆ’, ಅರುಣಾ ನರೇಂದ್ರ ಅವರ ‘ಗದ್ದಲದೊಳಗ್ಯಾಕ ನಿಂತಿ’, ಸವಿತಾ ಮುದ್ಗಲ್ ಅವರ ‘ಕಥಾ ಸರೋವರ’, ಲಲಿತಾ ಬೆಳವಾಡಿ ಅವರ ‘ಭಾವ ಸಿಂಚನ’ ಕೃತಿಗಳಿಗೆ ಉಮಾಶಂಕರ ಪ್ರತಿಷ್ಠಾನವು 2023ನೇ ಪುಸ್ತಕ ಪ್ರಶಸ್ತಿ ಪ್ರಕಟಿಸಿದೆ’ ಎಂದು ತಿಳಿಸಿದ್ದಾರೆ.

‘ಹುಬ್ಬಳ್ಳಿ ನಗರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾವ ಸಂಗಮ ದಶಮಾನೋತ್ಸವ ಸಮಾರಂಭದಲ್ಲಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಫಲಕ ಮತ್ತು ಗೌರವ ಸಮ್ಮಾನ ಒಳಗೊಂಡಿರುತ್ತದೆ‘ ಎಂದು ರಾಜೇಂದ್ರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.