ADVERTISEMENT

ಸಹ ಕೈದಿಗೆ ಕಲ್ಲಿನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 13:50 IST
Last Updated 26 ಡಿಸೆಂಬರ್ 2019, 13:50 IST

ಹುಬ್ಬಳ್ಳಿ: ಕೊಲೆ ಆರೋಪದ ಮೇಲೆ ನಗರದ ಉಪ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನ ಮೇಲೆ, ಮತ್ತೊಬ್ಬ ಕೈದಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಬೊಮ್ಮಸಂದ್ರದ ಖಾದರಸಾಬ ಮಹಮ್ಮದಸಾಬ ಮುನಿಯಾರ್ ಎಂಬಾತ, ರಾಯನಾಳದ ಸಿದ್ದಪ್ಪ ಗದಿಗೆಪ್ಪ ಕೋಳೂರನಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಘಟನೆಯಲ್ಲಿ ಸಿದ್ದಪ್ಪ ತಲೆಗೆ ಪೆಟ್ಟಾಗಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕೊಲೆ ಆರೋಪದ ಮೇಲೆ ಎರಡು ವರ್ಷದಿಂದ ಜೈಲಿನಲ್ಲಿರುವ ಇಬ್ಬರೂ ಬುಧವಾರ ಸಂಜೆ ಮಾತನಾಡುತ್ತಾ ಕುಳಿತಿದ್ದರು. ಆಗ ಸಿದ್ಧಪ್ಪ, ‘ನಿನ್ನನ್ನು ನೋಡಲು ಯಾರೂ ಬರುವುದಿಲ್ಲ. ಹೀಗಾದರೆ, ನೀನು ಜೈಲಿನಲ್ಲೇ ಕೊಳೆಯಬೇಕಾಗುತ್ತದೆ’ ಎಂದು ಮುನಿಯಾರ್‌ಗೆ ಹೇಳಿದ್ದಾನೆ. ಇದರಿಂದ ಸಿಟ್ಟಾದ ಮುನಿಯಾರ್‌ ಕಲ್ಲಿನಿಂದ ಸಿದ್ದಪ್ಪನಿಗೆ ಹೊಡೆದಿದ್ದಾನೆ’ ಎಂದು ಜೈಲರ್ ಅಶೋಕ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಗಳ ಕಂಡ ಸಿಬ್ಬಂದಿ ಹಾಗೂ ಸಹ ಕೈದಿಗಳು ಇಬ್ಬರನ್ನು ಸಮಾಧಾನಪಡಿಸಿದ್ದಾರೆ. ಬಳಿಕ, ತಲೆಗೆ ಗಾಯವಾಗಿ ರಕ್ತ ಸೋರುತ್ತಿದ್ದರಿಂದ ಸಿದ್ಧಪ್ಪನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ’ ಎಂದು ಹೇಳಿದರು. ಘಟನೆ ಸಂಬಂಧ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.