ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮಂಗಳವಾರ ಸಾಂಸ್ಕೃತಿಕ ಸೊಗಡಿನ ಹಿನ್ನೆಲೆಯುಳ್ಳ ಕರಡಿ ಕುಣಿತ ಸೋಗು ಹಾಕಿ ಜನರನ್ನು ಮನರಂಜಿಸಿದರು.
ಕರಡಿ (ಜಾಬವಂತ) ಮತ್ತು ಕೋಲು, ಕಂಬಳಿ, ಕೈಗೆ ಕಬ್ಬಿಣದ ಬಳೆ ಬಾರಿಸುವ ಮಾವುತನ ಪಾತ್ರಧಾರಿಗಳು ಗ್ರಾಮದ ಮನೆಗಳಿಗೆ ತೆರಳಿ ಕರಡಿ ಆಡಿಸುತ್ತ ಪದ ಹಾಡಿ ಕುಣಿದರು.
ಮನೆಯವರು ನೀಡಿದ ವಿವಿಧ ಬಗೆಯ ಉಂಡಿ, ಹಣ, ಕಾಳು ಸಂಗ್ರಹಿಸಿದರು. ಸಂಜೆ ಮಕ್ಕಳು, ಯುವಕರು, ವೃದ್ದರು ದೇವಸ್ಥಾನದಲ್ಲಿ ಸೇರಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸಿಹಿ ಸವಿದರು. ಮಹಾಬಳೇಶ್ವರ ಛಬ್ಬಿ ಕರಡಿ, ಮಾವುತನಾಗಿ ಮಡಿವಾಳಪ್ಪ ಅಂಗಡಿ ಮತ್ತು ಬಸವರಾಜ ಹೆಬ್ಬಳ್ಳಿ ವೇಷ ಧರಿಸಿದ್ದರು.
‘ಆಧುನಿಕ ಯುಗದಲ್ಲಿ ಕರಡಿ ಕುಣಿತ ಕಲೆ ಮರೆಯಾಗಿದೆ. ಕರಡಿ ಸೋಗು ಹಾಕಿ ಇಂದಿನ ಪಿಳೀಗೆಗೆ ಇದರ ಸೊಬಗನ್ನು ತಿಳಿಸುವ ಕೆಲಸ ಮಾಡಿದ್ದೇವೆ’ ಎಂದು ಕರಡಿ ಪಾತ್ರಧಾರಿ ಮಹಾಬಳೇಶ್ವರ ಛಬ್ಬಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.