ಉಪ್ಪಿನಬೆಟಗೇರಿ: ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಸೇರಿದಂತೆ ಸಂಘ ಸಂಸ್ಥೆಯಲ್ಲಿ ಸಾಲ ಮಾಡಿದ್ದ ಉಪ್ಪಿನಬೆಟಗೇರಿ ಯುವ ರೈತರೊಬ್ಬರು ಮನೆಯಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಡಿವೆಪ್ಪ ನಾಗಪ್ಪ ಯಮೋಜಿ (27) ಮೃತ ರೈತ. ಅವರಿಗೆ ತಾಯಿ, ಸಹೋದರಿ ಇದ್ದಾರೆ.
ಅಡಿವೆಪ್ಪ ಮೊಬೈಲ್ ಅಂಗಡಿ ಜತೆಗೆ ಕೃಷಿ ಮಾಡುತ್ತಿದ್ದರು. ಚಿಕ್ಕ ಹಳ್ಳದ ದಂಡೆಯ ಪಿತ್ರಾರ್ಜಿತ ಆಸ್ತಿ ಒಂದು ಎಕರೆ ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉದ್ದು ಬಿತ್ತನೆ ಮಾಡಿದ್ದರು. ಸತತ ಸುರಿದ ಮಳೆಗೆ ಹಳ್ಳ ತುಂಬಿ ಜಮೀನಿನಲ್ಲಿ ಹರಿದ ಪರಿಣಾಮ ಮಣ್ಣು ಸಹಿತ ಎಲ್ಲವೂ ಕೊಚ್ಚಿ ಹೋಗಿತ್ತು.
ಬ್ಯಾಂಕ್, ಸೊಸೈಟಿ ಮತ್ತುಸಂಘ ಸೇರಿದಂತೆ ಒಟ್ಟಾರೆ ₹ 2.70 ಲಕ್ಷ ಸಾಲ ಮಾಡಿದ್ದ ಎಂದು ಮೃತ ರೈತನ ತಂದೆ ನಾಗಪ್ಪ ಯಮೋಜಿ ದೂರಿನಲ್ಲಿ ತಿಳಿಸಿದ್ದಾರೆ. ಗರಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.