
ಪ್ರಜಾವಾಣಿ ವಾರ್ತೆವಂದೇ ಭಾರತ್
ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ–206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಅರಸೀಕೆರೆ ಎಕ್ಸ್‌ಪ್ರೆಸ್ (16214) ರೈಲು ಫೆ. 23, ಫೆ.24 ಹಾಗೂ ಅರಸೀಕೆರೆ–ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213) ರೈಲು ಸಂಚಾರ ಫೆ. 24 ಮತ್ತು ಫೆ. 25 ರಂದು ರದ್ದಾಗಿದೆ.
ತಡವಾಗಿ ಸಂಚಾರ: ಅರಸೀಕೆರೆ–ಹುಬ್ಬಳ್ಳಿ ರೈಲು (16213) ಫೆ.17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.
ರೈಲುಗಳ ನಿಯಂತ್ರಣ: ಫೆಬ್ರುವರಿ 25ರಂದು ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661) ರೈಲು ಮಾರ್ಗಮಧ್ಯೆ 35 ನಿಮಿಷ ನಿಯಂತ್ರಣವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.