ಹುಬ್ಬಳ್ಳಿ: ‘ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ನಮ್ಮ ಭವ್ಯ ಸಂಸ್ಕೃತಿ, ಧರ್ಮ, ಆಚಾರ–ವಿಚಾರಗಳು ಗೌಣವಾಗುತ್ತಿವೆ. ಅವುಗಳ ಉಳಿವು ಸದ್ಭಕ್ತರಿಂದ ಮಾತ್ರ ಸಾಧ್ಯ’ ಎಂದು ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸುಳ್ಳ ಗ್ರಾಮದ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಶಿವಸಿದ್ಧರಾಮೇಶ್ವರ ಶಿವಾಚಾರ್ಯರರ 10ನೇ ವರ್ಷದ ಪಟ್ಟಾಧಾಕಾರ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದಾನ, ಧರ್ಮ ಮಾಡುವ ಕೈಗಳು, ದೈವ ಭಕ್ತಿಯ ಮನಸ್ಸುಗಳು ಮತ್ತು ಧರ್ಮಾಭಿಮಾನಿಗಳು ಇರುವವರೆಗೆ ವೀರಶೈವ ಲಿಂಗಾಯತ ಧರ್ಮ ಉಳಿಯುತ್ತದೆ. ಎಲ್ಲರಲ್ಲೂ ಸಂಸ್ಕಾರ ಮುಖ್ಯ’ ಎಂದರು.
ವೀರಶೈವ ಜಂಗಮ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಹಿರೇಮಠ, ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ, ಸಣಕಲ್ಲಪ್ಪ ಒಂಟಿ, ಅಡವಯ್ಯ ಅರಳಿಮಟ್ಟಿಮಠ, ಹಿರಿಯರಾದ ಅರ್ಜುನಪ್ಪ ಮೆಣಸಿನಕಾಯಿ, ಮಲ್ಲಿಕಾರ್ಜುನ ಅಸುಂಡಿ, ಹೊಳೆಪ್ಪ ಪೂಜಾರ, ಸತೀಶ ದೇಮಕ್ಕನವರ, ಸಣಕಲ್ಲಪ್ಪ ಒಂಟಿ, ಮಲ್ಲಿಕಾಜಿಗೌಡ ಹಿರೇಗೌಡರ, ನಿಂಗಪ್ಪ ಶಿವಳ್ಳಿ, ಸಿದ್ರಾಮಪ್ಪ ದೇಮಕ್ಕನವರ, ಮಹಾದೇವ ಪೂಜಾರ, ಪ್ರದೀಪ ದೇಮಕ್ಕನವರ, ದೊಡ್ಡಯಲ್ಲಪ್ಪ ನೆರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.