ADVERTISEMENT

ಭಾಗ್ಯಜ್ಯೋತಿ ಹಿರೇಮಠಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 11:23 IST
Last Updated 28 ಸೆಪ್ಟೆಂಬರ್ 2022, 11:23 IST
ಭಾಗ್ಯಜ್ಯೋತಿ ಹಿರೇಮಠ
ಭಾಗ್ಯಜ್ಯೋತಿ ಹಿರೇಮಠ   

ಹುಬ್ಬಳ್ಳಿ: ಕನ್ನಡದ ಕವಯತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ 2022ನೇ ಸಾಲಿನ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಧಾರವಾಡ ಜಿಲ್ಲೆಯ ಗುಡಗೇರಿಯ ಭಾಗ್ಯಜ್ಯೋತಿ ಹಿರೇಮಠ ಅವರ ‘ಬಿದಿರ ಬಿನ್ನಹ’ ಕವನ ಸಂಕಲನ ಆಯ್ಕೆ ಆಗಿದೆ.

ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ‘ವಿಭಾ ಸಾಹಿತ್ಯ ಪ್ರಶಸ್ತಿ–2022’ರ ಸಂಚಾಲಕರಾದ ಸುನಂದಾ,ಪ್ರಕಾಶ ಕಡಮೆ ತಿಳಿಸಿದ್ದಾರೆ.

‘ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ಧ, ಗಾಂಧಿ, ಬಸವ, ಅಕ್ಕ ಇವರನ್ನು ನೇರವಾಗಿ ಹೆಸರಿಸದೆ ಅವರ ತಾತ್ವಿಕತೆಯನ್ನು ಮಾತ್ರ ಕಾವ್ಯವಾಗಿ ಕಟ್ಟುವ ಕಲೆಯನ್ನು ಮೈಗೂಡಿಸಿಕೊಂಡ ಬಗೆಗಾಗಿ ‘ಬಿದಿರ ಬಿನ್ನಹ’ ಆಯ್ಕೆ ಮಾಡಲಾಗಿದೆ’ ಎಂದು ತೀರ್ಪುಗಾರರಾದ ಸ.ಉಷಾ ಮತ್ತು ಕೇಶವ ಮಳಗಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.