ADVERTISEMENT

‘ಅಪ್ಪನ ಚಪ್ಪಲಿ’ ಕಥೆಗೆ ‘ವಿದ್ಯಾರ್ಥಿ ಕಥಾ' ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಮೇ 2023, 5:08 IST
Last Updated 25 ಮೇ 2023, 5:08 IST
ವಿನಯ್ ಸಿ.
ವಿನಯ್ ಸಿ.   

ಹುಬ್ಬಳ್ಳಿ: ಅಕ್ಷರ ಸಾಹಿತ್ಯ ವೇದಿಕೆಯು ನೀಡುವ ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’ಯು ಯುವ ಕವಿ, ಕಥೆಗಾರ ವಿನಯ್ ಸಿ. ಅವರ  ‘ಅಪ್ಪನ ಚಪ್ಪಲಿ’ ಕಥೆಗೆ ದೊರೆತಿದೆ.

ಪ್ರಶಸ್ತಿಯು ₹ 5 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ ಹಾಗೂ ವಿಜಯಾ ಅಗಸನಕಟ್ಟೆ ಅವರ ಸಹಯೋಗದಲ್ಲಿ ನಡೆದ 6ನೇ ವರ್ಷದ ಸ್ಪರ್ಧೆ ಇದಾಗಿದೆ. ಹಿರಿಯ ಬರಹಗಾರರಾದ ಕುಮಾರ ಬೇಂದ್ರೆ ಮತ್ತು ಪ್ರಕಾಶ ಕಡಮೆ ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ ತಿಂಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿನಯ್ ಸಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚಿಕ್ಕನಹಳ್ಳಿಯವರು. ಇವರ ಕೆಲವು ಕಥೆ ಮತ್ತು ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು ವಿವಿಯಲ್ಲೇ ಕನ್ನಡ ಎಂ.ಎ ಪದವಿ ಪಡೆದ ಅವರು, ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.