ADVERTISEMENT

ಮತದಾರರ ಪಟ್ಟಿ ಲೋಪ ಮುಚ್ಚಿಹಾಕುವ ಯತ್ನ: ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 11:25 IST
Last Updated 15 ಆಗಸ್ಟ್ 2025, 11:25 IST
<div class="paragraphs"><p>ಸಂತೋಷ ಲಾಡ್‌</p></div>

ಸಂತೋಷ ಲಾಡ್‌

   

ಧಾರವಾಡ: ‘ಚುನಾವಣಾ ಆಯೋಗದ ಆಯುಕ್ತರು ಡಿಜಿಟಲ್‌ ರೂಪದಲ್ಲಿ ಮತದಾರರ ಪಟ್ಟಿ ನೀಡುತ್ತಿಲ್ಲ. ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ದೂರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಹುಲ್‌ ಗಾಂಧಿ ಅವರು ಪ್ರತಿಯೊಬ್ಬ ಭಾರತೀಯರ ಮತ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಲೋಪಗಳಾಗಿವೆ ಎಂದು ಅವರು ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ ಬಿಜೆಪಿಯವರು ಯಾಕೆ ಮಾತನಾಡಬೇಕು. ಆಯೋಗಕ್ಕೂ ಬಿಜೆಪಿಗೂ ಏನು ಸಂಬಂಧ. ಬಿಹಾರದಲ್ಲಿ ಮತದಾರರ ‌ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಪಟ್ಟಿಯಿಂದ ಕೈಬಿಟ್ಟಿರುವ 65 ಲಕ್ಷ ಮತದಾರರ ಮಾಹಿತಿ ಬಿಜೆಪಿಯವರ ಬಳಿ ಇದೆಯೇ?’ ಎಂದು ಪ್ರಶ್ನಿಸಿದರು.

ADVERTISEMENT

‘ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ 32 ಲಕ್ಷ ಮತದಾರರನ್ನು ಸೇರ್ಪಡೆ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಸಂಖ್ಯೆ 42 ಲಕ್ಷ ಜಾಸ್ತಿಯಾಗಿತ್ತು. ಆರೇ ತಿಂಗಳಿನಲ್ಲಿ ಇಷ್ಟೊಂದು ಮತದಾರರು ಹೆಚ್ಚಾಗಿದ್ದರು. ಈಗ ಬಿಹಾರದಲ್ಲಿ 62 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ, ಏನಿದರ ಅರ್ಥ’ ಎಂದರು

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಲೋಕಸಭಾ ಚುನಾವಣೆಗಳು 20ರಿಂದ 25 ದಿನಗಳಲ್ಲಿ ಮುಗಿಯುತ್ತಿದ್ದವು. ಈಗಿನ ಬಿಜೆಪಿ ಸರ್ಕಾರದಲ್ಲಿ 70ರಿಂದ 90 ದಿನಗಳವರೆಗೆ ನಡೆಯುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.