ADVERTISEMENT

ರೈಲ್ವೆ ಮಾರ್ಗದಲ್ಲಿ ಕಾಮಗಾರಿ: ಹುಬ್ಬಳ್ಳಿ–ಅರಸೀಕೆರೆ ರೈಲು ಸಂಚಾರ ಭಾಗಶಃ ರದ್ದು

​ಪ್ರಜಾವಾಣಿ ವಾರ್ತೆ
Published 8 ಮೇ 2024, 15:40 IST
Last Updated 8 ಮೇ 2024, 15:40 IST
<div class="paragraphs"><p>ರೈಲು (ಸಾಂದರ್ಭಿಕ ಚಿತ್ರ )&nbsp;</p></div>

ರೈಲು (ಸಾಂದರ್ಭಿಕ ಚಿತ್ರ ) 

   

ಹುಬ್ಬಳ್ಳಿ: ಅರಸೀಕೆರೆ ಹಾಗೂ ಬಾಣಾವರ ರೈಲ್ವೆ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಮೇ 9, 13, 16, 20 ಹಾಗೂ 23ರಂದು ಹುಬ್ಬಳ್ಳಿ–ಅರಸೀಕೆರೆ ರೈಲು (16214) ಸಂಚಾರ ಬೀರೂರು–ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ.

ಮೇ 10, 14, 17, 21 ಹಾಗೂ 24ರಂದು ಅರಸೀಕೆರೆ–ಹುಬ್ಬಳ್ಳಿ (16213) ರೈಲು ಸಂಚಾರ ಅರಸೀಕೆರೆ–ಬೀರೂರು ಮಾರ್ಗದಲ್ಲಿ ಭಾಗಶಃ ರದ್ದಾಗಲಿದೆ.

ADVERTISEMENT

ಮೇ 16 ಹಾಗೂ 23ರಂದು ಹುಬ್ಬಳ್ಳಿ–ಬೆಂಗಳೂರು (17392) ರೈಲು 30 ನಿಮಿಷ, 14 ಹಾಗೂ 21ರಂದು ಬೆಂಗಳೂರು–ಹೊಸಪೇಟೆ (06243)  ರೈಲು 1 ಗಂಟೆ 40 ನಿಮಿಷ, ಬೆಂಗಳೂರು–ಹುಬ್ಬಳ್ಳಿ (12079) ರೈಲು 1 ಗಂಟೆ 20 ನಿಮಿಷ ತಡವಾಗಲಿದೆ. 16 ಹಾಗೂ 23ರಂದು ಹುಬ್ಬಳ್ಳಿ–ಚೆನ್ನೈ ಸೆಂಟ್ರಲ್ (17312) ರೈಲು 1 ಗಂಟೆ, ವಿಜಯಪುರ–ಯಶವಂತಪುರ (06546), ಬೆಳಗಾವಿ–ಮೈಸೂರು (17302) ವಿಜಯಪುರ–ಮಂಗಳೂರು (07377) ರೈಲು 55 ನಿಮಿಷ, ಹುಬ್ಬಳ್ಳಿ–ಬೆಂಗಳೂರು (07339) ರೈಲು 35 ನಿಮಿಷ ತಡವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.