ನವಲಗುಂದ : ಈ ಬಾರಿ ಉತ್ತಮ ಮಳೆಯಾಗಿದ್ದು ಅತ್ಯುತ್ತಮ ಇಳುವರಿ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಹಳದಿರೋಗ ಜೊತೆಗೆ ಬೂದುರೋಗ ಕಾಣಿಸಿಕೊಂಡಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.
ಹೊಲದಲ್ಲಿ ಬಿತ್ತಿದ ಹೆಸರು ಬೆಳೆ ಹಳದಿ ಹಾಗೂ ಬೂದು ಬಣ್ಣಕ್ಕೆ ತಿರುಗುತ್ತದ್ದು ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಬಾರದೇ ನಾಶವಾಗುವ ಭೀತಿ ಒಂದಡೆ ಇನ್ನೊಂದಕಡೆ ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿವೆ, ಹೂವುಬಿಟ್ಟಕಾಯಿಗಳು ಕೂಡಾ ಹಳದಿಬಣ್ಣದ ಅಂಕುಡೊಂಕು ಆಗಿದ್ದು ಶೇ 48 ರಷ್ಟು ಬೆಳೆ ನಾಶವಾಗುವ ಭೀತಿ ಎದುರಾಗಿದೆ.
ತಾಲ್ಲೂಕಿನಲ್ಲಿ 38 ಸಾವಿರ ಹೆಕ್ಟರ್ ಭೂಮಿಯಲ್ಲಿ ಹೆಸರು ಬಿತ್ತನೆಯಾಗಿದೆ. ಬೆಳೆಗೆ ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ಕಾರಣವಾಗಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಇದನ್ನು ಪ್ರಾರಂಭದಲ್ಲೇ ನಿಯಂತ್ರಿಸಿದರೆ ಉತ್ತಮ ಫಸಲು ಬರಲು ಸಾಧ್ಯ, ಹೊಲದಲ್ಲಿ ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ರೈತರು ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ನೌಕರ -ಆರ್. ಎಚ್. ಪದಕಿ ಹೇಳುತ್ತಾರೆ.
ಈಗಾಗಲೇ ರೈತರು 1500ರೂಗಳಿಗೆ 5ಕೆಜಿ ಬೀಜದ ಪ್ಯಾಕೆಟ್ ಖರೀದಿ ಮಾಡಿ ಬಿತ್ತನೆ ಮಾಡಿದ್ದು ರೈತರಿಗೆ ಆರ್ಥಿಕವಾಗಿ ತುಂಬಾ ಹೊರೆಯಾಗಿದೆ, ಈ ನಂಜುರೋಗಕ್ಕೆ ಯಾವುದೇ ಔಷದಿ ಉಪಚಾರವಿಲ್ಲ. ರೋಗವು ಒಂದೇ ಗಿಡದಿಂದ ಇಡೀ ಹೊಲವನ್ನೇ ಆವರಿಸುವಂತ ರೋಗವಾಗಿದೆ ಕೃಷಿ ಅಧಿಕಾರಿಗಳು ಇದುವರಿಗೂ ರೈತರ ಜಾಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅದೇ ಏನೇ ಇರಲಿ ಸಂಬಂಧಪಟ್ಟಂತ ಕೃಷಿಅಧಿಕಾರಿಗಳು ಸಮೀಕ್ಷೆ ಮಾಡಿ, ಈ ಬೆಳೆಗೆ ಈಗಾಗಲೇ ರೈತರು ಬೆಳೆವಿಮೆ ಮಾಡಿಸಿದ್ದು ಸರ್ಕಾರಕ್ಕೆ ವಿಮೆಕಂಪನಿಗೆ ರೈತರಿಗೆ ಹಾನಿಯಾದ ಕುರಿತು ವರದಿ ಸಲ್ಲಿಸಿ ವಿಮೆಕಂಪನಿ ಅಥವಾ ಸರ್ಕಾರದಿಂದ ಪರಿಹಾರ ದೊರಕುವುದೇ ಕಾಯ್ದುನೋಡಬೇಕು.
ಸರಕಾರಿ ಖರೀದಿ ಕೇಂದ್ರದಿಂದ ಹೆಸರುಬೀಜ ಖರೀದಿಸಿ ಬಿತ್ತನೆ ಮಾಡಿದ್ದೇನೆ, 2 ಸಲ ಔಷದೋಪಚಾರ ಮಾಡಿದರು ರೋಗ ನಿಯಂತ್ರಣ ಆಗುತ್ತಿಲ್ಲ ಕೃಷಿಇಲಾಖೆಯಲ್ಲಿ ರೋಗ ಹತೋಟಿಗೆ ಕಾರ್ಬನಡೈಸಿಮ್ ಎಂಬ ಪೌಡರ ಕೊಡುತ್ತಿದ್ದರು ಈ ಬಾರಿ ಅದು ಸ್ಟಾಕ್ ಇಲ್ಲದೆ ತೆಲೆಕೆಟ್ಟುಹೋಗಿದ್ದು ಲಾಭಾಂಶ ಬೇಡ ಮಾಡಿದ ಖರ್ಚು ಮರಳಿ ಬಾರದ ಪರಸ್ಥಿತಿ ಬಂದೋದಗಿದೆ.
–ಮಂಜುನಾಥ ರೈತ
ಸತತ ಮಳೆಯಿಂದ ರೈತರ ಜಾಮೀನುಗಳಿಗೆ ಭೇಟಿನೀಡಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲು ಆಗುತ್ತಿಲ್ಲ. ಮಳೆ ಸ್ವಲ್ಪವಾದರು ಕಡಿಮೆಯಾದರೆ ರೈತರ ಜಾಮೀನುಗಳಿಗೆ ಕೃಷಿವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಮಾಹಿತಿ ನೀಡುತ್ತೇವೆ. ರೈತರು ಹಳದಿ ಬೂದು ರೋಗಕ್ಕೆ ಥಯೋಮೈತಕ್ಝಾನ್ 1 ಟ್ಯಾಂಕ್ ಗೆ 6-8ಮಿಲಿ ಅಥವಾ ಒಲವಿನ್ ಫೆಕ್ಸು 15 ಮಿಲ್ ಎಣ್ಣಿ ಹಾಕಿ ಸಿಂಪರಣೆ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ.
-ತಿಪ್ಪೇಸ್ವಾಮಿ. ವಿ, ಕೃಷಿಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.