ADVERTISEMENT

ಕೆರೆಯಲ್ಲಿ ಮುಳುಗಿ ಯುವಕ ಸಾವು    

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:04 IST
Last Updated 2 ಅಕ್ಟೋಬರ್ 2020, 16:04 IST
ಗಣೇಶ್ ಗೌಳಿ
ಗಣೇಶ್ ಗೌಳಿ   

ಕಲಘಟಗಿ: ತಾಲ್ಲೂಕಿನ ಮಾಚಾಪೂರ ಗ್ರಾಮದ ಕ್ಯಾತನಕೆರೆಯಲ್ಲಿ ಮುಳುಗಿಪಟ್ಟಣದ ಗಣೇಶ್ ಗೌಳಿ (22) ಎಂಬ ಯುವಕ ಶುಕ್ರವಾರ ಮೃತಪಟ್ಟಿದ್ದಾನೆ.

ಮಧ್ಯಾಹ್ನ ಸ್ನೇಹಿತರ ಜೊತೆ ಈಜಲು ಹೋಗಿ ಈಜು ಬಾರದೆ ಕೆರೆಯಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.ಕೆರೆಯಲ್ಲಿ ಯುವಕ ಮುಳುಗಿರುವ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾಕಾರ್ಯ ಕೈಗೊಂಡರು. ಎರಡುಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿ ಯುವಕನ ಮೃತದೇಹ ಹೊರಗೆ ತೆಗೆದಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಆನಂದ ಮುದೇನವರ, ಮಾರುತಿ ಹೈಬತ್ತಿ, ಎಂ.ಐ ಕಿತ್ತೂರು, ರಾಜು ಜಾಧವ್, ಉಮೇಶ ತೆಂಬದ ಪಾಲ್ಗೊಂಡಿದ್ದರು.ಯುವಕನ ಮೃತದೇಹ ಪತ್ತೆಯಾಗುತ್ತಿದ್ದಂತೆಯೇಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಮೃತಯುವಕನನ್ನು ನೋಡಲು ಮಾಜಿ ಸಚಿವ ಸಂತೋಷ್ ಲಾಡ್ ಬಂದು ಕುಟುಂಬದವರಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.