ಹೊಸಪೇಟೆ (ವಿಜಯನಗರ): ಕೋವಿಡ್ ನಿಂದ ಎರಡು ವರ್ಷಗಳಿಂದ ಹಂಪಿಯಲ್ಲಿ ಕಳೆಗುಂದಿದ್ದ ಹೋಳಿ ಹಬ್ಬವನ್ನು ಈ ಸಲ ಸಂಭ್ರಮದಿಂದ ಆಚರಿಸಲಾಯಿತು.
ಸ್ಥಳೀಯರೊಂದಿಗೆ ವಿದೇಶಿಗರು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಡಿ.ಜೆ., ಡ್ರಮ್ ನಾದಕ್ಕೆ ಮೈಮರೆತು ಹೆಜ್ಜೆ ಹಾಕಿದರು.
ಹಂಪಿಯ ಜನತಾ ಪ್ಲಾಟ್ ನಿಂದ ರಥಬೀದಿವರೆಗೆ ಕುಣಿಯುತ್ತ ಹೆಜ್ಜೆ ಹಾಕಿದರು. ಸ್ಥಳೀಯ ಯುವಕ, ಯುವತಿಯರು, ಗೈಡ್ ಗಳು, ರಷ್ಯಾ, ಇಸ್ರೇಲ್ ದೇಶದ ಪ್ರವಾಸಿಗರು ಸಂಭ್ರಮಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.