ADVERTISEMENT

ಅನರ್ಹರಿಗೆ ಬಿಪಿಎಲ್: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:10 IST
Last Updated 18 ಅಕ್ಟೋಬರ್ 2012, 10:10 IST

ನರಗುಂದ: ಅರ್ಹರಿಗೆ ಬಿಪಿಎಲ್ ಕಾರ್ಡ್ ದೊರೆಯದೆ ಅನರ್ಹರಿಗೆ ಹೆಚ್ಚಾಗಿ ದೊರೆಯುತ್ತಿ ರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವ ಜನಿಕರು ಬುಧವಾರ ಆಹಾರ ಇಲಾಖೆಯ ಶಿರಸ್ತೇ ದಾರರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು. 

 ಹೆಚ್ಚಿನ ಆದಾಯ ಹೊಂದಿದವರಿಗೆ ಬಿಪಿಎಲ್ ಪಡಿತರ ಚೀಟಿಗಳ ವಿತರಣೆಯಾದರೆ ಬಡವರಿಗೆ ಎಪಿಎಲ್  ವಿತರಣೆಯಾಗುವ ಮೂಲಕ ನಿಜವಾದ ಫಲಾನುಭವಿಗಳನ್ನು ಕಡೆಗಣಿಸಲಾಗುತ್ತಿದೆ  ಎಂದು  ಆರೋಪಿಸಿದರು. ಇದಕ್ಕೆ ಕಾರಣ ಆಹಾರ ವಿಭಾಗದ ಅಧಿಕಾರಿಗಳು ಕಾರಣ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದರಿಂದ ಕೆಲವು ಕಾಲ  ಹಳೇ ತಹಶೀಲ್ದಾರ್ ಕಚೇರಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ವಾಯಿತು. ಕೂಡಲೇ  ಪಡಿತರ ಚೀಟಿ ವಿತರಿಸುವ ಕಾರ್ಯ ನಿಲ್ಲಬೇಕು ಸರಿಯಾದ ರೀತಿಯಲ್ಲಿ ಅರ್ಹರಿಗೆ ಪಡಿತರ ಚೀಟಿ ವಿತರಣೆಯಾಗಬೇಕು. ಅಲ್ಲಿಯವರೆಗೆ  ಈ ಪ್ರಕ್ರಿಯೆಯನ್ನು  ಸ್ಥಗಿತಗೊಳಿಸುವಂತೆ ಆಗ್ರಹಿಸ ಲಾಯಿತು.

 ಈ ಕುರಿತು  ಮಾತನಾಡಿದ ಆಹಾರ ಇಲಾಖಾ ಅಧಿಕಾರಿಗಳು  ಕೆಲ ತಾಂತ್ರಿಕ ತೊಂದರೆಯಿಂದ  ಅನರ್ಹರಿಗೆ ಬಿಪಿಎಲ್ ಸಿಗುತ್ತಿಲ್ಲ.  ಇದನ್ನು ಸರಿಪಡಿಸಲಾಗುದು ಎಂದು  ಸ್ಪಷ್ಟಪಡಿಸಿದರು.

  ಈ ಸಂದರ್ಭದಲ್ಲಿ ಮೈಲಾರಗೌಡ ಲಿಂಗನಗೌಡ್ರ, ಐ.ಪಿ.ಚಂದನ್ನವರ, ಕೆ.ಜಿ.ನರಗುಂದ, ದಾವಲಸಾಬ ಪಠಾಣ, ಅಜ್ಜಪ್ಪ ಪಿಡ್ಡನಾಯ್ಕರ, ಅಹ್ಮದ ಖಾಜಿ ಸೇರಿದಂತೆ ಮೊದಲಾದವರು  ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.