ADVERTISEMENT

‘ಅಭಿವೃದ್ಧಿ ಸಹಿಸದ ಬಿಜೆಪಿಯಿಂದ ಸುಳ್ಳು ಆರೋಪ’

ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 7:15 IST
Last Updated 18 ಏಪ್ರಿಲ್ 2018, 7:15 IST

ನರೇಗಲ್: ‘ಅಭಿವೃದ್ದಿಯನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿವೆ’ ಎಂದು ಶಾಸಕ ಜಿ.ಎಸ್.ಪಾಟೀಲ ಟೀಕಿಸಿದರು.

ಪಟ್ಟಣದಲ್ಲಿ ಮಂಗಳವಾರ ಕುರುವಿನಶೆಟ್ಟಿ ಜನಾಂಗದ 80ಕ್ಕೂ ಹೆಚ್ಚು ಸದಸ್ಯರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತಾವಧಿಯಲ್ಲಿ ಪಟ್ಟಣದಲ್ಲಿನ ಆಶ್ರಯ ಮನೆ ಹಂಚಿಕೆ ಕಗ್ಗಂಟಾಗಿತ್ತು. ನಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಆಶ್ರಯ ಮನೆ ಹಂಚಿಕೆಯನ್ನು ಸರಿಪಡಿಸಲಾಗಿದೆ ಹಾಗೂ ಎಸ್.ಸಿ,ಎಸ್.ಟಿಯವರ ಪಾಲಿನ ಹಣವನ್ನು ಸರ್ಕಾರದಿಂದ ತುಂಬಲಾಗಿದೆ’ ಎಂದರು.

ನೇಕಾರ ಜನಾಂಗದ ಮುಖಂಡ ವೀರಣ್ಣ ಸೊನ್ನದ ಮಾತನಾಡಿದರು. ಕುರುವಿನ ಶೆಟ್ಟಿ ಜನಾಂಗದ 80ಕ್ಕೂ ಹೆಚ್ಚು ಸದಸ್ಯರಿಗೆ ಶಾಲು ಹೊದಿಸಿ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ADVERTISEMENT

ಕಲ್ಮೇಶ ತೊಂಡಿಹಾಳ, ವೀರಣ್ಣ ಶೆಟ್ಟರ, ಮಂಜುನಾಥ ಅಂಗಡಿ, ಬಿ.ಕೆ.ಪೊಲೀಸ್‌ಪಾಟೀಲ, ಶರಣಪ್ಪ ಗಂಗರಗೊಂಡ, ಅರುಣ ಕಾಮತ್‌, ನಿಂಗಪ್ಪ ಲಕ್ಕನಗೌಡ್ರ, ವಿ.ಎಸ್.ಸೋಮನಕಟ್ಟಿಮಠ ಇದ್ದರು.

ಗದುಗಿನಲ್ಲಿ ಕಾಂಗ್ರೆಸ್ ಪ್ರಚಾರ

ಗದಗ: ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲರ ಪರವಾಗಿ ಪಕ್ಷದ ಮುಖಂಡರು 19 ಹಾಗೂ 20ನೇ ವಾರ್ಡ್‌ನಲ್ಲಿ ಪ್ರಚಾರ ಮಾಡಿದರು.

ಇಲ್ಲಿನ ವೀರನಾರಾಯಣ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಬಳಿಕ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ನಗರದ ಹಾಳದಿಬ್ಬ ಓಣಿ, ನರಿಭಾವಿ ಓಣಿ, ಖಾನತೋಟ, ಮದ್ಲಿ ಓಣಿ, ಮುಲ್ಲಾ ಓಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದರು.

ಕಾಂಗ್ರೆಸ್‌ನ ಶಹರ ಘಟಕದ ಅಧ್ಯಕ್ಷ ಗುರಣ್ಣ ಬಳಗಾನೂರ, ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಭು ಬುರಬುರೆ, ಉಪಾಧ್ಯಕ್ಷ ಪ್ರಕಾಶ ಬಾಕಳೆ, ನಗರಸಭೆ ಸದಸ್ಯ ಎಲ್.ಡಿ.ಚಂದಾವರಿ, ಎಂ.ಸಿ.ಶೇಖ್, ಅನಿಲ ಗರಗ, ರುದ್ರಮ್ಮ ಕೆರಕಲಮಟ್ಟಿ, ಅಶೋಕ ಬಣ್ಣದ, ಹುಲಿಗೆಪ್ಪ ತಳವಾರ ಇದ್ದರು.

ದೊಡ್ಡಮನಿ ಪರ ಪ್ರಚಾರ

ಲಕ್ಷ್ಮೇಶ್ವರ: ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಪರವಾಗಿ ಪುರಸಭೆ ಸದಸ್ಯ ವಿ.ಜಿ. ಪಡಗೇರಿ, ಬಸವರಾಜ ಓದಾನವರ, ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ತಿಪ್ಪಣ್ಣ ಸಂಶಿ ಅವರು ಮಂಗಳವಾರ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದರು. ವಿ.ಜಿ. ಪಡಗೇರಿ ಮಾತನಾಡಿ ‘ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಐದು ವರ್ಷಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ’ ಎಂದರು.

ಮಲ್ಲಪ್ಪ ಗುಡಗುಂಟಿ, ನೀಲಪ್ಪ ಪಡಗೇರಿ, ನೀಲಪ್ಪ ಕೋರಿ, ಎಸ್‌.ವೈ ಯರ್ಲಗಟ್ಟಿ, ಹೊಸಮಠ, ಪುಟ್ಟಪ್ಪ ಕೋರಿ, ಯಲ್ಲಪ್ಪ ಗೊಜಗೊಜಿ, ಎಸ್‌.ಆರ್‌. ಕೋರಿ, ಸಿದ್ದಪ್ಪ ಕರಿಗಾರ ಇದ್ದರು. ಮಲ್ಲೇಶ ಪೂಜಾರ, ಸಿದ್ದಪ್ಪ ಗದಗ, ಯಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.