ADVERTISEMENT

ಅವಕಾಶ ಸದುಪಯೋಗಕ್ಕೆ ಗಾಂವಕರ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:20 IST
Last Updated 20 ಮಾರ್ಚ್ 2012, 5:20 IST

ನರಗುಂದ: ವಿದ್ಯಾರ್ಥಿ ಜೀವನದಲ್ಲಿ ಲಭ್ಯವಾಗುವ ಅವಕಾಶ ಸದು ಪಯೋಗ ಪಡಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ ಸಲಹೆ ನೀಡಿದರು.
ಪಟ್ಟಣದ ಸಿದ್ಧೇಶ್ವರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ  ಸಾಂಸ್ಕೃತಿಕ ಹಾಗೂ ಕ್ರೀಡಾ ಚಟು ವಟಿಕೆಗಳ ಸಮಾರೋಪ ಸಮಾ ರಂಭ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
 
ವಿದ್ಯಾರ್ಥಿಗಳು ವೈಯಕ್ತಿಕ ಗುರಿ ಸಾಧಿಸುವುದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ. ಆಗ ಕಲಾಂ ಕಂಡ ಕನಸು ಈಡೇರುವ ಮೂಲಕ  ಅವರ ಇಚ್ಛೆಯಂತೆ ಭಾರತ 2020ರಲ್ಲಿ ಹೊಸ ಅಧ್ಯಾಯ ಬರೆಯಲು ಸಾಧ್ಯ ಎಂದರು. 

ಅತಿಥಿಗಳಾಗಿದ್ದ ಹುಬ್ಬಳ್ಳಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಕೆ.ಎಸ್‌ಕೌಜಲಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ಅಗತ್ಯವಾಗಿದೆ. ಅದನ್ನು ಬೆಳೆಸುವಲ್ಲಿ ಎಲ್ಲರೂ ಪ್ರಯತ್ನಿಸ ಬೇಕಾಗಿದೆ.  ಮಾತೃಭಾಷೆಯನ್ನು ಸಮರ್ಪಕವಾಗಿ ಕಲಿತಾಗ ಉಳಿದ ಭಾಷೆಗಳನ್ನು ಕಲಿಯಲು ಸಾಧ್ಯ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ನೀಲಾಂಬಿಕಾ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕು ಹಸನಾಗಿಸಿಕೊಳ್ಳಲು  ಶ್ರಮಪಟ್ಟು ಅಧ್ಯಯನ ಮಾಡಬೇಕೆಂದು ಹೇಳಿದರು.ಅತಿಥಿಗಳಾಗಿ ಸಿಡಿಸಿ ಸದಸ್ಯರಾದ ಸಿ.ಎಸ್. ಸಾಲೂಟಗಿಮಠ, ವಿ.ಆರ್‌ಗಡಾದ, ಕ್ರೀಡಾ ವಿಭಾಗದ ಕಾರ್ಯಾ ಧ್ಯಕ್ಷ ದಾವೂದ ಝೈ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಾವಕ್ಕಾ ಬಡಿಗೇರ, ಅಪರ್ಣಾ ಸಾವಕಾರ, ಗೌಡಪ್ಪಗೌಡ ಮೇಲಿಮನಿ, ಬಸಲಿಂಗಪ್ಪ ಕತ್ತಿ ಹಾಜರಿದ್ದರು.

ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ ಎಚ್.ಎಸ್. ವಾರ್ಷಿಕ ವರದಿ ವಾಚಿಸಿ ದರು, ಹೆಚ್ಚು ಅಂಕ ಗಳಿಸಿದ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.ಎಸ್.ಕೆ.ಪಾಟೀಲ ಸ್ವಾಗತಿಸಿದರು. ರವಿಶಂಕರ ಗಡಿಯಪ್ಪನವರ ನಿರೂಪಿಸಿ ದರು. ಸಂಜೀವ ಡಂಬಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.