ADVERTISEMENT

ಐತಿಹಾಸಿಕ ಲಕ್ಕುಂಡಿ ಉತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 8:55 IST
Last Updated 6 ಮಾರ್ಚ್ 2011, 8:55 IST

ಗದಗ: ಐತಿಹಾಸಿಕ ಲಕ್ಕುಂಡಿ ಉತ್ಸವದ ಉದ್ಘಾಟನೆ ಮಾ. 6ರಂದು ಮಧ್ಯಾಹ್ನ 12 ಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಉತ್ಸವ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು.

ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಜಗದೀಶ ಶೆಟ್ಟರ ಅವರು ಶಿವಮೊಗ್ಗದ ಎಚ್.ಆರ್. ಕೇಶವಮೂರ್ತಿ ಅವರಿಗೆ ‘ಕುಮಾರವ್ಯಾಸ’ ಪ್ರಶಸ್ತಿ ಪ್ರದಾನ ಮಾಡುವರು. ಪ್ರವಾಸೋದ್ಯಮ ಖಾತೆ ಸಚಿವ ಜಿ. ಜನಾರ್ಧನರೆಡ್ಡಿ ದೋಣಿ ವಿಹಾರ ಉದ್ಘಾಟಿಸುವರು.

ADVERTISEMENT

ಲೋಕೋಪಯೋಗಿ ಖಾತೆ ಸಿ.ಎಂ. ಉದಾಸಿ, ಆರೋಗ್ಯ ಖಾತೆ ಸಚಿವ ಬಿ. ಶ್ರಿರಾಮುಲು, ಸಹಕಾರ ಖಾತೆ ಸಚಿವ ಲಕ್ಷ್ಮಣ ಸವದಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಕಳಕಪ್ಪ ಬಂಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ ಪಾಲ್ಗೊಳ್ಳುವರು.

ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ಶಾಸಕರಾದ ಶ್ರಿಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶಿವರಾಜ ಸಜ್ಜನರ, ಮೋಹನ ಲಿಂಬಿಕಾಯಿ, ಶ್ರಿನಿವಾಸ ಮಾನೆ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬೀರಪ್ಪ ಬಂಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ  ಕಮಲಾಬಾಯಿ ಪೂಜಾರ, ಉಪಾಧ್ಯಕ್ಷ ಅಂದಪ್ಪ ಉಮಚಗಿ, ಸದಸ್ಯ ಮಹೇಶ ಮುಸ್ಕಿನಬಾವಿ, ಲಕ್ಕುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗವ್ವ ಮಜ್ಜಿಗುಡ್ಡ, ಉಪಾಧ್ಯಕ್ಷೆ ಅನಸೂಯಾ ಗುದಗಿ ಅತಿಥಿಗಳಾಗಿ  ಭಾಗವಹಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ ಝಳಕಿ, ಉನ್ನತ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮದನಗೋಪಾಲ, ಬೆಳಗಾವಿ ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ, ಬೆಳಗಾವಿ ಉತ್ತರವಲಯ ಐಜಿಪಿ ಪವನಜೀತಸಿಂಗ್ ಸಂಧು ವಿಶೇಷ ಆಹ್ವಾನಿತರಾಗಿದ್ದಾರೆ.

ಇದಕ್ಕೂ ಮುನ್ನಾ ಬೆಳಿಗ್ಗೆ 8ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರಿಂದ ವಿಶ್ವ ಕನ್ನಡ ನುಡಿತೇರು ಉದ್ಘಾಟನೆ. 8.30ಕ್ಕೆ ಶಾಸಕ ಶ್ರಿಶೈಲಪ್ಪ ಬಿದರೂರ ಅವರಿಂದ ಗ್ರಾಮೀಣ ಕ್ರೀಡೆಗಳ ಉದ್ಘಾಟನೆ. 9ಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ ಅವರಿಂದ ಜಾನಪದ ಕಲಾತಂಡಗಳ ಮೆರವಣಿಗೆ ಉದ್ಘಾಟನೆ. 11ಕ್ಕೆ ಶಾಸಕ ರಾಮಣ್ಣ ಲಮಾಣಿ ಅವರಿಂದ ವಸ್ತು ಪ್ರದರ್ಶನ ಉದ್ಘಾಟನೆ. 11.30ಕ್ಕೆ ಗ್ರಾ. ಪಂ. ಅಧ್ಯಕ್ಷೆ ಗಂಗವ್ವ ಮಜ್ಜಿಗುಡ್ಡ ಅವರಿಂದ ಚಿತ್ರಕಲಾ ಶಿಬಿರ ಉದ್ಘಾಟನೆ ನಡೆಯಲಿದೆ.

ಮಧ್ಯಾಹ್ನ 2.50ಕ್ಕೆ ಭಾವೈಕ್ಯತಾ ಪ್ರವಚನ. ಝಡ್. ಎ. ಮೊಹಮ್ಮದ ಅರ್ಫತ್ ಆಲಂ. 3.30ಕ್ಕೆ ಸುಗಮ ಸಂಗೀತ- ಶೃತಿ ಭಟ್ಟ. 3.15ಕ್ಕೆ ಗಂಗಾಳ ಭಜನೆ- ನೀಲಪ್ಪ ಲಮಾಣಿ. 3.30ಕ್ಕೆ ಸಮೂಹ ನೃತ್ಯ-ಗಾನಯೋಗಿ ಕಲಾಕೇಂದ್ರ. 3.45ಕ್ಕೆ ಸುಗಮ ಸಂಗೀತ -ವಿರೂಪಾಕ್ಷಪ್ಪ ಹೊಸಮನಿ. ಸಂಜೆ 4ಕ್ಕೆ ದ್ವಂದ್ವ ಗಾಯನ- ಡಾ. ವಿಜಯಶ್ರಿ ಎಸ್. ಅಂಗಡಿ ಹಾಗೂ ಮೇಘಾ ಹುಕ್ಕೇರಿ. 4.45ಕ್ಕೆ ದಾಸರ ಪದಗಳು- ಶಕುಂತಲಾ ಹಾದಿಮನಿ.

4.30ಕ್ಕೆ ಭರತನಾಟ್ಯ- ನಾಗವೇಣಿ ಜಾಲಿಹಾಳ. 4.45ಕ್ಕೆ ದಾಸರ ಪದಗಳು- ವೆಂಕಟೇಶ ಕುಲಕರ್ಣಿ. 5ಕ್ಕೆ ತಬಲಾ ವಾದನ -ಶ್ರೀಧರ ಮಾಂಡ್ರೆ. 5.15ಕ್ಕೆ ಸುಗಮ ಸಂಗೀತ-ವೀರೇಶ ಕಿತ್ತೂರ. 5.30ಕ್ಕೆ ಕೋಲಾಟ -ಮಹಾಂತೇಶ ವಾಲಿ. 5.45ಕ್ಕೆ ಸಂಗೀತ -ಕಿರಣ ಹಾನಗಲ್. 6ಕ್ಕೆ ಶಹನಾಯಿ- ಸಣ್ಣ ಮಲಕಪ್ಪ ಭಜಂತ್ರಿ.

6.15ಕ್ಕೆ ಭರತನಾಟ್ಯ -ಶ್ರಿಯಾ ದಿನಕರ. 6.30ಕ್ಕೆ ಸುಗಮ ಸಂಗೀತ -ರವೀಂದ್ರ ಹಂದಿಗನೂರ. ರಾತ್ರಿ 7ಕ್ಕೆ ಪಂಚವೀಣೆ -ವಾಣಿ ಯದುನಂದನ. 7.30ಕ್ಕೆ ಲೇಸರ್ ಶೋ, 8ಕ್ಕೆ ಗೀತ ಕುಂಚ -ಬಿ.ಕೆ.ಎಸ್. ವರ್ಮಾ. 9ಕ್ಕೆ ಕರ್ನಾಟಕ ವೈಭವ -ಡಾ. ಮಾಯಾರಾವ್. 10ಕ್ಕೆ ರಸಮಂಜರಿ. 12.ಕ್ಕೆ ಪೂಜಾ ಕುಣಿತ- ಕೆ.ಬಿ. ಸ್ವಾಮಿ. 12.15ಕ್ಕೆ ವಚನ ಸಂಗೀತ -ಡಾ. ಪಂಚಾಕ್ಷರಯ್ಯ ಹಿರೇಮಠ. 12.30ಕ್ಕೆ ವೀರಗಾಸೆ -ಎಂ.ಆರ್. ಬಸಪ್ಪ. 12.45ಕ್ಕೆ ವಚನ ಸಂಗೀತ- ಮಹೇಶ್ವರಿ ಹಿರೇಮಠ. 1ಕ್ಕೆ ಕಥಕ್ ನೃತ್ಯ- ಶ್ವೇತಾ ಸೊಂಡೂರು.

1.15ಕ್ಕೆ ಡೊಳ್ಳು ಕುಣಿತ -ಕಾಳಿದಾಸ ಯುವಕ ಸಂಘ. 1.30ಕ್ಕೆ ವೀರಗಾಸೆ -ವೀರಭದ್ರೇಶ್ವರ ಜಾನಪದ ಮೇಳ. 1.45ಕ್ಕೆ ಹಗಲು ವೇಷ -ರಾಮಣ್ಣ ವೇಶಗಾರ. 2ಕ್ಕೆ ಸಂಗ್ಯಾಬಾಳ್ಯಾ ಹಾಡು -ರಾಮಣ್ಣ ಕಟ್ಟಿಮನಿ. 2.15ಕ್ಕೆ ಸುಗ್ಗಿ ಕುಣಿತ - ವೀರಭದ್ರೇಶ್ವರ ಸಾಂಸ್ಕೃತಿಕ ಜಾನಪದ ಕಲಾತಂಡ. 2.30ಕ್ಕೆ ಜಾನಪದ ಸಂಗೀತ -ಬಸವರಾಜ ಹಡಗಲಿ. 2.45ಕ್ಕೆ ನಾಟಕ ಆರ್.ಎನ್. ಕೆ. ಮಿತ್ರ ಮಂಡಳಿ ವತಿಯಿಂದ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.