ನರೇಗಲ್: ಸಮೀಪದ ಅಬ್ಬಿಗೇರಿ ಗ್ರಾಮದ ಹೊರ ವಲಯದಲ್ಲಿನ ಬಯಲು ಕಂಠಿ ಬಸವೇಶ್ವರ ಜಾತ್ರೆ ಶ್ರಾವಣ ಮಾಸದ ಕೊನೆಯ ಸೋಮವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಕಳಸ ಹಾಗೂ ಹಗ್ಗದ ಮೆರವಣಿಗೆ ನಡೆಸಿ, ಜಾಂಜ್, ಡೊಳ್ಳು, ಭಜನೆಯೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ರಥಕ್ಕೆ ಕಳಸವನ್ನು ಜೋಡಿಸಲಾಯಿತು.
ಸಂಜೆ 5 ಗಂಟೆಗೆ ರಥವನ್ನು ಪಾದಗಟ್ಟಿಯವರೆಗೆ ಎಳೆಯಲಾಯಿತು. ರಥೋತ್ಸವದಲ್ಲಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.