ADVERTISEMENT

ಗದಗದಲ್ಲಿ 8 ಸಾವಿರ ಶೌಚಾಲಯ ನಿರ್ಮಾಣ ಗುರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:32 IST
Last Updated 18 ಡಿಸೆಂಬರ್ 2013, 4:32 IST

ಗದಗ: ತಾಲ್ಲೂಕಿಗೆ 2013–14ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ  ₨36,37,98 ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಿ.ರೇವಣ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಉದ್ಯೋಗ ಖಾತ್ರಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ಹಲವು ಕಾರ್ಯಕ್ರಮ ರೂಪಿಸಲಾಗಿದೆ.  ₨12,39, 40,500 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಅಲ್ಲದೇ ವೈಯಕ್ತಿಕ ಫಲಾನುಭವಿ ಯೋಜನೆಯಲ್ಲಿ ಹೆಚ್ಚುವರಿಯಾಗಿ ₨23,98,57,500 ಕೋಟಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ₨ 3,67, 66 ಕೋಟಿ ಅನುದಾನ ಮಂಜೂರಾ ಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳ ಬೇಕು.

  ಜಿಲ್ಲಾ  ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಹಣದ ಕೊರತೆ ಯಿಲ್ಲ. ಯಾರೇ ಬಂದರೂ ಕೆಲಸ ನೀಡಲಾಗುವುದು. ದಿನಕ್ಕೆ ₨ 174 ಕೂಲಿ ನೀಡಲಾಗುವುದು. ಇಎಫ್‌ಎಂ ವ್ಯವಸ್ಥೆ ಮೂಲಕ ಕೂಲಿಕಾರರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ ಎಂದು ಹೇಳಿದರು.

₨ 1.5 ಲಕ್ಷ ವೆಚ್ಚದಲ್ಲಿ ರೈತರ ಜಮೀನಿನಲ್ಲಿ ಒಡ್ಡು ಹಾಕುವುದು, ಸಮತಟ್ಟು, ಕೃಷಿ ಹೊಂಡ, ಇಂಗು ಗುಂಡಿ, ಅರಣ್ಯ ಸಸಿ ನಡೆವುದು, ಬಾವಿ ತೋಡುವ ಕೆಲಸ ಕೈಗೊಳ್ಳಬಹುದು. ಆದರೆ ಎಸ್‌ಸಿ ಮತ್ತು ಎಸ್‌ಟಿಗಳಿಗೆ ₨1.5 ಲಕ್ಷಕ್ಕಿಂತಲ್ಲೂ ಹೆಚ್ಚು ವೆಚ್ಚ ಮಾಡಬಹುದು. ಇದಕ್ಕೆ ಮಿತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಖಾತ್ರಿ ಯೋಜನೆ ಸಮರ್ಪಕ ಅನು ಷ್ಠಾನಕ್ಕೆ ಕಾಯಕ ಸಂಘ ರಚಿಸಲಾಗಿದೆ. ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡಿ, ಗುರುತಿನ ಚೀಟಿ ನೀಡಲಾಗಿದೆ. ತರಬೇತಿ ಪಡೆದ ವ್ಯಕ್ತಿ 25 ಕೂಲಿಕಾರರನ್ನು ಕೆಲಸಕ್ಕೆ ಕರೆದುಕೊಂಡು ಬಂದರೆ ಆತನಿಗೆ ದಿನದ ಕೂಲಿ ₨174 ಹಾಗೂ ಕೂಲಿಕಾರರನ್ನು ಕರೆದುಕೊಂಡು ಬಂದಿದ್ದಕ್ಕೆ ತಲಾ ರೂ.3 ರಂತೆ ಹಣ ನೀಡಲಾಗುವುದು. ಪ್ರತಿ ದಿನ ಹಾಜ ರಾತಿ ಪಡೆಯುವುದು ಹಾಗೂ ಪ್ರತಿ ಸೋಮವಾರ ಪ್ರತಿ ಗ್ರಾಮ ಪಂಚಾ ಯಿತಿಗೆ ಕೂಲಿಕಾರರ ಬೇಡಿಕೆ ಸಲ್ಲಿಸುವುದು ಸಂಘದ ಅಧ್ಯಕ್ಷನ ಕೆಲಸ ವಾಗಿದೆ ಎಂದು ವಿವರಿಸಿದರು.

ಶಾಲೆಗಳಲ್ಲಿ ಆಟದ ನಿರ್ಮಾಣಕ್ಕೆ ಒಟ್ಟು 68 ಶಾಲೆ ಗುರುತಿಸಲಾಗಿದೆ. ಗದಗ ತಾಲ್ಲೂಕಿನಲ್ಲಿ 8,250  ಶೌಚಾ ಲಯ ನಿರ್ಮಾಣದ ಗುರಿ ಹೊಂದ ಲಾಗಿದ್ದು, ಈ ಪೈಕಿ 2,178 ನಿರ್ಮಾಣಗೊಂಡಿದ್ದು, 1,500 ಪ್ರಗತಿಯಲ್ಲಿದೆ. ಶೌಚಾಲಯ ನಿರ್ಮಾಣಕ್ಕೆ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ₨ 15 ಸಾವಿರ ನೀಡಲಾಗುವುದು. ಬಯಲು ಶೌಚ ದಿಂದ ರೋಗ, ರುಜಿನಗಳು ಹರಡು ತ್ತಿದ್ದು, ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ಜಾಗೃತಿ ಮೂಡಿಸಲಾ ಗುತ್ತಿದೆ. ಗ್ರಾಮ ಸಭೆ ಕಡ್ಡಾಯವಾಗಿ ನಡೆಸಬೇಕು. ವೀಡಿಯೋ ಮತ್ತು ಫೋಟೋ ತೆಗೆಸಲಾಗುತ್ತಿದೆ ಎಂದರು.

ಕಣಗಿನಹಾಳ ಮತ್ತು ಬೆಳಧಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅವ್ಯವಹಾರ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕಣಗಿನಹಾಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಧಡಿಯಲ್ಲಿ ಮೂವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಸರ್ಕಾರ ಮರು ತನಿಖೆಗೆ ಆದೇಶಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.