ADVERTISEMENT

ಚಿಂಚಲಿ: ಗ್ರಾಮದೇವತೆ ಮೆರವಣಿಗೆ ಇಂದು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2011, 6:55 IST
Last Updated 30 ಆಗಸ್ಟ್ 2011, 6:55 IST
ಚಿಂಚಲಿ: ಗ್ರಾಮದೇವತೆ ಮೆರವಣಿಗೆ ಇಂದು
ಚಿಂಚಲಿ: ಗ್ರಾಮದೇವತೆ ಮೆರವಣಿಗೆ ಇಂದು   

ಮುಳಗುಂದ: ಪ್ರತಿ ವರ್ಷದಂತೆ ಬಸವೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದೇವತೆ (ದ್ಯಾಮವ್ವ ದೇವಿ)ಯ ಉಡಿತುಂಬುವ ಕಾರ್ಯಕ್ರಮ ಇದೇ 30 ರಂದು ಮಂಗಳವಾರ ಬೆಳಿಗ್ಗೆ ಸಮೀಪದ ಚಿಂಚಲಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಭಕ್ತಿಭಾವದ ಜೊತೆಗೆ ಮಾನವನ ಸೂಕ್ಷ್ಮ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿ, ದುಃಖ ದುಮ್ಮಾನಗಳ ದೂರ ಮಾಡಿ ಮನಸ್ಸಿಗೆ ಮುದು ನೀಡಲು ಗ್ರಾಮೀಣರಿಗೆ ಬಿಡುವಿನ ವೇಳೆಯಲ್ಲಿ ನಡೆಯುವ ಜಾತ್ರೆ, ಉತ್ಸವಗಳು ಸಂಸ್ಕ್ರತಿಯ ಪ್ರತೀಕವಾಗಿದ್ದು, ಗ್ರಾಮಸ್ಥರು ಇಂತಹ ಸಂದರ್ಭದಲ್ಲಿ ಗ್ರಾಮದೇವಿಗೆ ಅತಿ ಮಡಿವಂತಿಕೆಯ ಜೊತೆಗೆ ದೇವಸ್ಥಾನ ದಲ್ಲಿ ಅಂದು ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸುವರು.

ನಂತರ ಸಂಪ್ರದಾಯದಂತೆ ನಡೆಯುವ ದೇವಿ ಮೂರ್ತಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳು ಮನೆ ಮನೆಗೆ ತೆರಳಿ ಉಡಿ ತುಂಬಿಸಿಕೊಂಡು ಉಡುಗೊರೆ ಪಡೆದು ನಂತರವೇ ಗ್ರಾಮದ ಪ್ರದಕ್ಷಿಣೆ ಆರಂಭಿಸುತ್ತಾಳೆ. 
ಗ್ರಾಮಸ್ಥರು ಸೇರುದಂತೆ ಸುತ್ತಲಿನ ಗ್ರಾಮಗಳ ಜನತೆ ಶ್ರದ್ಧಾ ಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸಿ ಉಡಿತುಂಬಿ ಕೈಮುಗಿದು ನಮಿಸುವ ಮೂಲಕ ಗ್ರಾಮದೇವತೆಯ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತವರಣವನ್ನೇ ಸೃಷ್ಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.