ADVERTISEMENT

ಜನಪದ ಸಂಸ್ಕೃತಿಯೇ ಜೀವನ ಪದ್ಧತಿ: ಬಂಡಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:00 IST
Last Updated 14 ಫೆಬ್ರುವರಿ 2012, 9:00 IST

ರೋಣ:  ಜೀವನ ಪದ್ಧತಿಯಲ್ಲಿ ಜನಪದ ಸಂಸ್ಕೃತಿ ಹಾಸುಹೊಕ್ಕಾಗಿದೆ. ಜನಪದ ಸೊಗಡು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕೆ.ಆರ್.ಡಿ.ಸಿ.ಎಲ್.ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಹೂಸ ಸಂತೆ ಬಜಾರ ಮೈದಾನದಲ್ಲಿ ರೋಣ ಪುರಸಭೆ ಹಾಗೂ ಪಂಚಾಕ್ಷರಿ ಯುವಕ ಸಂಘದ ಆಶ್ರಯದಲ್ಲಿ ರೋಣ ತಾಲ್ಲೂಕು ಮಟ್ಟದ ಯುವ ಜನಮೇಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಟಿವಿ ಮಾಧ್ಯಮಗಳ ಹಾವಳಿಯಿಂದ ಜನಪದ ಸಂಸ್ಕೃತಿ ನಶಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. 

 ಬಿಜೆಪಿ ಮುಖಂಡ ಅಶೋಕ ದೇಶಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ ಶಿವಕುಮಾರ ಸಾಲಮನಿ ವಹಿಸಿದ್ದರು.

ಸಮಾರಂಭದಲ್ಲಿ ಪುರಸಭೆಯ ಉಪಾಧ್ಯಕ್ಷ ಎಚ್.ಬಿ.ನವಲಗುಂದ, ಎ.ಪಿ.ಎಂ.ಸಿ.ಅಧ್ಯಕ್ಷ ಅಂಬರೇಶ ಅರಳಿ, ರಾಜಣ್ಣ ಹೂಲಿ, ಗುರುರಾಜ ಕುಲಕರ್ಣಿ, ಶಿವಣ್ಣ ಪಲ್ಲೇದ, ಸಿ.ಪಿ.ಐ.ಶಂಕರ ರಾಗಿ, ವಿಶ್ವನಾಥ ಜಿಡ್ಡಿಬಾಗಿಲ, ಬಸವರಾಜ ಗಂಗಾಧರ, ಅಂದಾನಗೌಡ ಲಿಂಗನಗೌಡ್ರ, ತಿಪ್ಪಣ್ಣ ಹವಳಪ್ಪಣ್ಣವರ,  ಎಸ್.ಎಸ್.ಹಿರೇಮಠ, ಬಸವರಾಜ ಪುರ್ತಗೇರಿ, ಶಿವನಗೌಡ ತಿಮ್ಮನಗೌಡ್ರ, ಬಸನಗೌಡ ಪಾಟೀಲ, ನಿಂಗನಗೌಡ ಅಚ್ಚನಗೌಡ್ರ, ರಂಗನಗೌಡ ಅಚ್ಚನಗೌಡ್ರ, ಆರ್.ಬಿ.ಚಿನ್ನವಾಲರ, ವೀರಪ್ಪ ಹವಳಪ್ಪನವರ ಮತ್ತಿತರರು ಹಾಜರಿದ್ದರು.

ಮುತ್ತಣ್ಣ ಲಿಂಗನಗೌಡ್ರ ಸ್ವಾಗತಿಸಿದರು, ಎಸ್.ಎಸ್.ತಳ್ಳಿಹಾಳ ನಿರೂಪಿಸಿದರು,ಜೆ.ಬಿ.ಬೂದಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.