ADVERTISEMENT

`ಜನಹಿತ ಮರೆತ ಬಿಜೆಪಿ'

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 6:36 IST
Last Updated 13 ಏಪ್ರಿಲ್ 2013, 6:36 IST
ನರಗುಂದದಲ್ಲಿ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ವ
ನರಗುಂದದಲ್ಲಿ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ವ   

ನರಗುಂದ: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ ನೀಡುವ ಮೂಲಕ ಜನ ಹಿತವನ್ನೇ ಮರೆತಿದೆ. ಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ ಹೇಳಿದರು.

ತಾಲ್ಲೂಕು ಘಟಕದ ಆಶ್ರಯದಲ್ಲಿ ಗುರುವಾರ ಬಸವೇಶ್ವರ ಸಮುದಾಯಭವನದಲ್ಲಿ ನಡೆದ ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಜನತೆ ಬೇಸತ್ತಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಿ ಸುವ ವಿಶ್ವಾವಿದೆ ಎಂದರು.

ಜಿಲ್ಲೆಯಾದ್ಯಂತ ಪಕ್ಷಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಎಲ್ಲ ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ ಎಂದರು. ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಕಳಪೆ ಕಾಮಗಾರಿ ನಡೆಸುವ ಮೂಲಕ ಸರ್ಕಾರದ ಹಣವನ್ನು ಪೋಲು ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಕಳೆದ ಐದು ವರ್ಷದಲ್ಲಿ ಹಿಂದೆಂದೂ ಕಂಡರಿಯದಷ್ಟು ಕೆಟ್ಟ ಆಡಳಿತ ನಡೆದಿದೆ. ಹಾಗಾಗಿ  ಕಾಂಗ್ರೆಸ್‌ಗೆ ಮತ ನೀಡುವಂತೆ  ಮನವಿ ಮಾಡಿದರು. ಬದಲಾವಣೆ ಹಾಗೂ ಸುಸ್ಥಿರ ಆಡಳಿತಕ್ಕೆ ಕಾಂಗ್ರೆಸ್‌ನ್ನು ಬೆಂಬಲಿ ಸುವಂತೆ ಕೋರಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್ ಮಾತನಾಡಿ,  ಕೆಟ್ಟ ಆಡಳಿತಕ್ಕೆ ಸಾಕ್ಷಿ ಇದ್ದರೆ  ಅದು ಬಿಜೆಪಿ ಸರಕಾ ರವೇ ಆಗಿದೆ ಎಂದು ಲೇವಡಿ ಮಾಡಿದರು. ಅಭಿವೃದ್ಧಿ ಗಾಗಿ ಕಾಂಗ್ರೆಸ್‌ಗೆ ಬೆಂಬಲಿಸಿ  ಮತ ನೀಡುವಂತೆ  ಕೋರಿದರು. ಹೊಳೆಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ, ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. 

ಇದೇ ಸಂದರ್ಭದಲ್ಲಿ ಬಿಜೆಪಿಯ  ಚಿಕ್ಕನರಗುಂದದ ಬಿ.ಸಿ ಬ್ಯಾಳಿ, ಶಿವನಗೌಡ ಸಾಲೂಟಗಿ, ಶಿರೋಳದ ಬಿ.ವಿ.ಪಾಟೀಲ, ಪ್ರಕಾಶ ಗೌಡ ತಿರಕನಗೌಡ್ರ, ರಂಗನಗೌಡ ತಿರಕನಗೌಡ್ರ, ಜಗಾಪುರದ ಸುಭಾಸ ದೇವಕ್ಕಿ, ಹುಣಸಿಕಟ್ಟಿಯ ಮುತ್ತಪ್ಪ ಮುಳ್ಳೂರು, ಚಂದ್ರು ಹಡಪದ, ಮಡಿವಾಳಪ್ಪ ಬೆಣ್ಣಿ, ಭೈರನ ಹಟ್ಟಿಯ ಚಂದ್ರು ಮೊರಬದ, ಎಂ.ವಿ.ಐನಾಪೂರ, ಕೊಣ್ಣೂರಿನ  ಕೆ.ಬಿ.ಕೆಂಚನಗೌಡ್ರ, ಕುಡ್ಲೆಪ್ಪ ಖೋದಾನಪುರ, ನರಗುಂದದ ಎಂ.ಎಂ .ಮುಳ್ಳೂರು, ಮಹೇಶ ಬೋಳಶೆಟ್ಟಿ, ದಾವಲಸಾಬ್ ಮುಳಗುಂದ, ವಿ.ವಿ.ಕ್ವಾಟಿ, ಮಾಬುಸಾಬ್ ಬಿಚಗತ್ತಿ, ಯಲ್ಲಪ್ಪ ಹಟ್ಟಿ, ಮಲ್ಲಪ್ಪ ಚೊಳಚಗುಡ್ಡ, ಮದಗುಣಕಿಯ  ಹನಮಂತಗೌಡ ದನೇದಗುಡ್ಡ ಕಾಂಗ್ರೆಸ್ ಸೇರಿದರು. ಬಿಎಸ್‌ಆರ್‌ನ  ರವಿ ಯರಗಟ್ಟಿ, ಗುರುಶಾಂತಪ್ಪ ದೊಡಮನಿ ಹಾಗೂ ಹಿರೇಕೊಪ್ಪದ ಶಿವಾನಂದ ಅಂಗಡಿ, ಬಸನಗೌಡ ದಾಡಿಬಾವಿ ಸೇರಿದಂತೆ ವಿವಿಧ  ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.

ಸಭೆಯಲ್ಲಿ  ಶಹರ ಘಟಕದ ಅಧ್ಯಕ್ಷ ಚಂಬಣ್ಣ ವಾಳದ, ಎಸ್.ಡಿ.ಕೊಳ್ಳಿಯವರ, ದ್ಯಾಮಂಣ್ಣ ಸವದತ್ತಿ, ದ್ಯಾಮಣ್ಣ ಕಾಡಪ್ಪನವರ, ರಾಜು ಕಲಾಲ, ವಿಠ್ಠಲ ಶಿಂಧೆ, ಪುರಸಭೆ ಸದಸ್ಯರಾದ ಸಿ.ಬಿ.ಪಾಟೀಲ, ಎಸ್.ಆರ್.ಪಾಟೀಲ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT