ADVERTISEMENT

ಬುಡಕಟ್ಟು ಕಲೆ ಉಳಿಸಿ-ಬೆಳೆಸಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:55 IST
Last Updated 19 ಮಾರ್ಚ್ 2012, 3:55 IST
ಬುಡಕಟ್ಟು ಕಲೆ ಉಳಿಸಿ-ಬೆಳೆಸಿ
ಬುಡಕಟ್ಟು ಕಲೆ ಉಳಿಸಿ-ಬೆಳೆಸಿ   

ಗದಗ: ಆಧುನಿಕತೆಯ ಭರಾಟೆಯ ಇಂದಿನ ದಿನದಲ್ಲಿ ಬುಡಕಟ್ಟು ಸಂಪ್ರದಾಯಿಕ ಕಲೆಗಳನ್ನು  ಉಳಿಸಿ ಬೆಳೆಸಿಕೊಂಡು ಪ್ರತಿಯೊಬ್ಬರ ಹೊಣೆ ಯಾಗಿದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಕಪ್ಪರದ ಹೇಳಿದರು.

ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ವಾರ್ತಾ ಇಲಾಖೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಗುಳ್ಳಾಪುರದ ಶೇಖರ ಸಿದ್ದಿ ನೇತೃತ್ವದ ಸಿದ್ದಿನಾಸ್ ಡಮಾಮಿ ಮಂಡಳಿಯಿಂದ ಏರ್ಪಡಿಸಿದ್ದ ಡಮಾಮಿ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಕರು ದುಶ್ಚಟಗಳಿಂದ ದೂರವಿದ್ದು, ಗ್ರಾಮೀಣ ಕ್ರೀಡೆ, ಜಾನಪದ ಕಲೆಗಳನ್ನು ಉಳಿಸುವಲ್ಲಿ ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಜನರಲ್ಲಿ ಬುಡಕಟ್ಟು ಜನಾಂಗದ ಕಲೆಗಳನ್ನು ಪರಿಚಯಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ವಾರ್ತಾ ಇಲಾಖೆಯ ಎಸ್.ಎಸ್. ಕಟ್ಟಿ ಮಾತನಾಡಿ, ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಕಲಾವಿದರ ಪಾರಂಪರಿಕ ಕಲಾ ಪ್ರಕಾರಗಳನ್ನು ಗುರುತಿಸಿ ಅವುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ವಾರ್ತಾ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಈ ಕಾರ್ಯಕ್ರಮವು ಜಿಲ್ಲೆಯ 7 ಗ್ರಾಮಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.    ಕಾರ್ಯ ಕ್ರಮದಲ್ಲಿ ಗ್ರಾಮ ಷ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು .

ಶಿಕ್ಷ್ಞಣದಿಂದ ಉನ್ನತಿ ಸಾಧ್ಯ

ಲಕ್ಷ್ಮೇಶ್ವರ: ಯಾವುದೇ ದೇಶ ಪ್ರಗತಿ ಸಾಧಿಸಬೆಕಾದರೆ ಆ ದೇಶದ ಪ್ರಜೆಗಳು ಶೈಕ್ಷಣಿಕವಾಗಿ ಮುಂದುವರೆಯಬೇಕು. ಅಂದಾಗ ಮಾತ್ರ ಆ ದೇಶ ಉನ್ನತಿ ಕಾಣಲು ಸಾಧ್ಯ~ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಹೇಳಿದರು.

ಪಟ್ಟಣದ ಸ್ಫೂರ್ತಿ ಎಜ್ಯುಕೇಷನ್ ಸೊಸೈಟಿಯ ಹೆಲೋ ಕಿಡ್ಸ್ ಸ್ಕೂಲ್‌ನಲ್ಲಿ ಈಚೆಗೆ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಿ.ವಿ. ಹೂಗಾರ ಮಾತನಾಡಿ `ಹೊಸ ದಾಗಿ ಆರಂಭವಾದ ಶಾಲೆಗಳು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು  ಎಂದರು.ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.