ADVERTISEMENT

ಮತದಾನ ಜಾಗೃತಿಗಾಗಿ ನೀರಿಗಿಳಿದ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:26 IST
Last Updated 28 ಏಪ್ರಿಲ್ 2018, 10:26 IST
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಯ ವಿವಿಧ ಅಧಿಕಾರಿಗಳು ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಇಳಿದು ಮೀನುಗಾರಿಕೆ ನಡೆಸುತ್ತಿರುವ ಶಿಳ್ಳಿಕ್ಯಾತ ಸಮುದಾಯದ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಯ ವಿವಿಧ ಅಧಿಕಾರಿಗಳು ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಇಳಿದು ಮೀನುಗಾರಿಕೆ ನಡೆಸುತ್ತಿರುವ ಶಿಳ್ಳಿಕ್ಯಾತ ಸಮುದಾಯದ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು   

ಮುಂಡರಗಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ, ಸ್ವೀಪ್ ಸಮಿತಿ ಹಾಗೂ ಚುನಾವಣಾ ಆಯೋಗದ ವಿವಿಧ
ಹಂತಗಳ ಅಧಿಕಾರಿಗಳು ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಇಳಿದು ಮೀನುಗಾರಿಕೆ ನಡೆಸುತ್ತಿದ್ದ ಶಿಳ್ಳಿಕ್ಯಾತ ಸಮುದಾಯದ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಮಧ್ಯಾಹ್ನ ಹಮ್ಮಿಗಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಮತದಾನ ಪ್ರೋತ್ಸಾಹಿಸುವ ಬರಹಗಳುಳ್ಳ ಫಲಕಗಳನ್ನು ಹಿಡಿದು
ಮೀನು ಹಿಡಿಯುವ ತೆಪ್ಪಗಳ ಮೂಲಕ ಬ್ಯಾರೇಜಿನ ಹಿನ್ನೀರಿಗೆ ಇಳಿದರು. ತೆಪ್ಪಗಳ ಮೂಲಕ ಮೀನು ಹಿಡಿಯುತ್ತಿದ್ದವರ ಬಳಿ ತೆರಳಿ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು.

ಜಿಲ್ಲಾ ಸ್ವೀಪ್ ಅಧ್ಯಕ್ಷ ಮಂಜುನಾಥ ಚವ್ಹಾಣ ಮಾತನಾಡಿ, ‘ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಮೇ 12ರಂದು ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು. ಮತಗಟ್ಟೆಗೆ ತೆರಳುವ ಮುನ್ನ ಗುರುತಿನ ಚೀಟಿ ಕೊಂಡೊಯ್ಯಬೇಕು’ ಎಂದರು.

ADVERTISEMENT

ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಟಿ.ದಿನೇಶ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡರಗಿ, ಸೆಕ್ಟರ್ ಅಧಿಕಾರಿಗಳಾದ ಎಂ.ಡಿ.ತೂಗೂಣಿಸಿ, ಬಿ.ಎಸ್.ಹೊಸಳ್ಳಿ, ಬಿ.ಎನ್.ರಾಟಿ, ಶಶಿಧರ ಹೊಂಬಳ, ಎಚ್.ಎಂ.ಕಾತರಕಿ, ಪ್ರದೀಪ್ ಕದಂ, ಗುರು ಬಸವರಾಜ ಮತದಾರ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಶಿಳ್ಳಿಕ್ಯಾತರ ಸಮುದಾಯದ ಗುರುಸಿದ್ದಪ್ಪ, ಶೀನಪ್ಪ, ಹನುಮಂತ, ತೋಂಟಹನುಮಪ್ಪ, ಗಿರಿಯಪ್ಪ, ಹನುಮಂತ ಸಿಂಗಟಾಲೂರು, ನಾಗಪ್ಪ ಸಂದಲಪ್ಪ, ಹಾಲೇಶ ಹನುಮಂತ, ನಾಗರಾಜ ಶೆಣೆಪ್ಪ, ಬಸವಂತ ನಾಗಪ್ಪ ಈ ಸಂದರ್ಭ
ದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.