ADVERTISEMENT

ಮಹಿಳೆಯರು ಸಾವಲಂಬಿಗಳಾಗಲು ಕರೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:35 IST
Last Updated 21 ಸೆಪ್ಟೆಂಬರ್ 2011, 6:35 IST

ಗದಗ: ಇಂದಿನ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಮಹಿಳೆಯರು ಸ್ವ ಉದ್ಯೋಗ ಆರಂಭಿಸಿ ಸ್ವಾವಲಂಬಿಗ ಳಾಗಬೇಕು ಎಂದು ತಾಲ್ಲೂಕು ಪಂಚಾ ಯಿತಿ ಸದಸ್ಯ ಮಹೇಶ ಮುಸ್ಕಿನಬಾವಿ ಕರೆ ನೀಡಿದರು.

ತಾಲ್ಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಇತ್ತೀಚೆಗೆ ನಬಾರ್ಡ್ ಹಾಗೂ ಮಹಾಲಕ್ಷ್ಮೀ ಮಹಿಳಾ ವಿವಿದೋದ್ದೇಶಗಳ ತರಬೇತಿ ಕಲಾ ಕೇಂದ್ರದ ಸಹಯೋಗದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಏರ್ಪಡಿಸಿದ್ದ ಕಸೂತಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸರ್ಕಾರ ಅನೇಕ ಯೋಜ ನೆಗಳನ್ನು ಜಾರಿಗೆ ತಂದಿದೆ. ಮಹಿಳೆ ಯರು ಹೆಚ್ಚು ಸಂಘಟಿತರಾಗಿ ಅವುಗ ಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಂದಪ್ಪ ತಿಮ್ಮಾಪೂರ ಮಾತನಾಡಿ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಕರಕುಶಲ ತರಬೇತಿ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಮಹಾಲಕ್ಷ್ಮೀ ತರಬೇತಿ ಸಂಸ್ಥೆಯ ಅಧ್ಯಕ್ಷೆ ನಾಗವೇಣಿ ವಡವಡಿ ಮಾತನಾಡಿ, ಸಂಸ್ಥೆಯು ಕಳೆದ 22 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಸಾವಿರಾರು ಮಹಿಳೆಯಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಿದೆ. 13 ದಿನಗಳವರೆಗೆ ನಡೆದ ಕಸೂತಿ ಕಲೆಯ ತರಬೇತಿ ಪಡೆದ ಶಿಬಿರಾರ್ಥಿಗಳು ಸ್ವ ಉದ್ಯೋಗ ಪ್ರಾರಂಭಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಎ.ಎಂ. ಹಂದ್ರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ಮಜ್ಜಿಗುಡ್ಡ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನೂಸೂಯಾ ಗುದಗಿ, ಸಂಸ್ಥೆಯ  ಉಪಾಧ್ಯಕ್ಷ ವೆಂಕಟೇಶ ವಡವಡಿ, ವನಜಾಕ್ಷಿ ಬಡಿಗೇರ ಮತ್ತಿತರರು ಹಾಜರಿದ್ದರು. ಶಿಲ್ಪಾ ಅರಹುಣಸಿ ಸ್ವಾಗತಿಸಿದರು. ವಿದ್ಯಾ ಪಾಪನಾಶಿ ಕಾರ್ಯಕ್ರಮ ನಿರೂಪಿಸಿದರು. ಗಾಯಿತ್ರಿ ಬಡಿಗೇರ ವಂದಿಸಿದರು.

ಪ್ರೋಬಸ್ ಕ್ಲಬ್ ಪಾಕ್ಷಿಕ ಸಭೆ
ಗದಗ: ಗದಗ-ಬೆಟಗೇರಿ ಪ್ರೋಬಸ್ ಕ್ಲಬ್‌ನ ಪಾಕ್ಷಿಕ ಸಭೆ ಇತ್ತೀಚೆಗೆ ಸ್ಥಳೀಯ ಜಿಲ್ಲಾ ಕ್ರೀಡಾಂಗಣ ಹತ್ತಿರದ ರೋಟರಿ ಐ ಕೇರ್ ಕೇಂದ್ರದಲ್ಲಿ ಜರುಗಿತು.

ಕ್ಲಬ್ ಅಧ್ಯಕ್ಷ ಪಿ.ಸಿ. ಕತ್ತಿಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಎಫ್. ಚೇಗರಡ್ಡಿ ಅತಿಥಿಯಾಗಿ ಭಾಗವಹಿಸಿ ಶಿಕ್ಷಕರ ಕರ್ತವ್ಯ ಹಾಗೂ ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಿದರು. ಎಂ.ಎಸ್. ಪಾಟೀಲ. ಬಸವರಾಜ ಕೊಂಚಿಗೇರಿ, ಎಸ್.ಎ. ಪಾಟೀಲ ಮತ್ತಿತರರು ಹಾಜರಿದ್ದರು.

ಎಂ.ಎ. ಪತ್ತಾರ ಪ್ರಾರ್ಥಿಸಿದರು. ವೈ.ಡಿ. ಮರಿಗೌಡರ ಕಾರ್ಯಕ್ರಮ ನಿರೂಪಿಸಿದರು. ಯು.ಡಿ. ಅಂಗಡಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.