ರೋಣ: ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಾರನಬಸರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿತ್ತು. ಆದರೆ ಮಂಗಳವಾರ ಮತ್ತೆ ಹೊಟ್ಟೆನೋವು, ಭೇದಿ ಕಾಣಿಸಿಕೊಂಡ ಪರಿಣಾಮ ಮತ್ತೆ 42 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಸೋಮವಾರ ಊಟ ಮಾಡಿದ ಕೆಲವು ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲ ಎಂದು ಮನೆಯಲ್ಲಿದ್ದಾಗ ದಿಢೀರನೇ ಹೊಟ್ಟೆನೂವು ಪ್ರಾರಂಭವಾಗಿ ವಾಂತಿ, ಭೇದಿಗೆ ತುತ್ತಾದರು. ಇದರಿಂದ ಗಾಬರಿಗೊಂಡ ಪೋಷಕರು ಅವರನ್ನು ಮತ್ತೆ ಆಸ್ಪತ್ರಗೆ ಸೇರಿಸಿದು. ವಿದ್ಯಾರ್ಥಿಗಳೆಲ್ಲರೂ 6 ರಿಂದ 14 ವರ್ಷದೊಳಗಿನ ಮಕ್ಕಳಾಗಿರುವುದರಿಂದ ತೀವ್ರ ಹೊಟ್ಟೆ ನೋವು ತಾಳಲಾರದೆ ಅಳುತ್ತಿದ್ದ ದೃಶ್ಯ ಕಂಡುಬಂತು. ಸೋಮವಾರ ದಾಖಲಾದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಚಿಕಿತ್ಸೆ ನೀಡಿರುವುದರಿಂದ ಅನೇಕ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಯಾಗಿ ಮನೆಗೆ ತೆರಳಿದ್ದಾರೆ.
ಇವರಲ್ಲಿ ತೀವ್ರತೆಯಿಂದ ಬಳಲುತಿದ್ದ ನಿರಂತರವಾಗಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಮಂಗಳವಾರ ದಾಖಲಾದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ತಹಶೀಲ್ದಾರ್ ಎ.ಜಿ.ಪಂಡಿತ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ.ಅಸುಂಡಿ, ತಾ.ಪಂ.ಇಒ ಎಸ್.ಎಂ. ಪಿಡಶೆಟ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಮೊಕಾಶಿ ಘಟನಾ ಸ್ಥಳ ಮಾರನಬಸರಿಗೆ ಆಗಮಿಸಿದಾಗ ಗ್ರಾಮಸ್ಥರು ಮುಖ್ಯ ಶಿಕ್ಷಕ ಪಿ.ಬಿ.ಪಾಟೀಲ ಮತ್ತು ಅಡುಗೆ ತಯಾರಕರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಮುಖ್ಯ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಮತ್ತು ಅಡುಗೆ ತಯಾಕರನ್ನು ಸೇವೆಯಿಂದ ಅಮಾನತುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.