ADVERTISEMENT

ಯೋಗದಿಂದ ರೋಗ ದೂರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 5:15 IST
Last Updated 23 ಏಪ್ರಿಲ್ 2011, 5:15 IST
ಯೋಗದಿಂದ ರೋಗ ದೂರ
ಯೋಗದಿಂದ ರೋಗ ದೂರ   

ರೋಣ: ‘ಪ್ರತಿಯೊಬ್ಬರು ಪ್ರತಿನಿತ್ಯ ವಿವಿಧ ಯೋಗಾಸನ ಮಾಡಬೇಕು  ಯೋಗದಲ್ಲಿ ನಿರತರಾಗುವುದರಿಂದ ಸರ್ವ ರೋಗ ಗಳಿಂದ ಮುಕ್ತವಾಗಿ ಉತ್ತಮ ಮನಸ್ಸು ಹಾಗೂ ಸದೃಢ ಆರೋಗ್ಯ ಹೊಂದಬಹುದು ಅಲ್ಲದೆ ದೀರ್ಘಾಯುಷ್ಯ ಪಡೆಯಬಹುದು ಎಂದು ಹರಿದ್ವಾರದ ಪತಂಜಲಿ ಯೋಗಾಶ್ರಮದ ಯೋಗ ಗುರು ರಾಮದೇವ ಬಾಬಾ ಹೇಳಿದರು.

ಶುಕ್ರವಾರ ಸಂಜೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಪತಂಜಲಿ ಗ್ರಾಮೋದ್ಯೋಗ ಸಂಘಟನೆ ಹಾಗೂ ಪಟ್ಟಣದ ವಿವಿಧ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಯೋಗಾಸನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯೋಗಾಸನವನ್ನು ಎಲ್ಲರೂ ಯಾವುದೇ ಖರ್ಚು ವೆಚ್ಚಗಳಿಲ್ಲದೆ  ಮಾಡಬಹುದು ತಮ್ಮ ದೇಹವನ್ನು ದಂಡಿಸಬಹುದು ಇದರಿಂದ ದೇಹದ ಸರ್ವಅಂಗಗಳಿಗೂ ಉತ್ತಮವಾದ ವ್ಯಾಯಾಮವಾಗುತ್ತದೆ’ ಎಂದು ಸಲಹೆ ನೀಡಿದರು.

ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ಬೇರು ಮಟ್ಟದಲ್ಲಿ ತೊಲಗಿಸಲು ನಾಗರಿಕರು ಸಂಕಲ್ಪ  ತೊಡಬೇಕು. ವಿದೇಶದಲ್ಲಿರುವ ದೇಶದ 4 ಲಕ್ಷ ಕೋಟಿ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರಲು ಕೇಂದ್ರ ಸರ್ಕಾರ ಕ್ರಮ ಕೈಕೊಳ್ಳಬೇಕು ಇದನ್ನು ಜಾರಿಗೊಳಿಸಲು ಜೂನ್ 4ರಂದು ದೆಹಲಿಯಲ್ಲಿ ನಾನು ಉಪವಾಸ ಸತ್ಯಾಗ್ರವನ್ನು ಕೈಕೊಳ್ಳುತ್ತಿದ್ದೇನೆ ಇದಕ್ಕೆ ದೇಶದ ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಶೋಕ ನವಲಗುಂದ ಸ್ವಾಗತಿಸಿದರು, ಬಸವರಾಜ ಜಗಾಪೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.